ಭಾರತ, ಮೇ 20 -- ಭಗವಾನ್ ಶ್ರೀಕೃಷ್ಣನ ದ್ವಾರಕೆಯನ್ನು ಹುಡುಕುವುದಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ತಜ್ಞರು ಗುಜರಾತ್‌ನಲ್ಲಿ ಸಮುದ್ರದಾಳಕ್ಕಿಳಿದು ಅನ್ವೇಷಿಸಿದ್ದರು. ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿನ ಕಡಲಿನಲ್ಲಿ ಈ ಶೋಧ ಕಾರ್ಯ ಪೂರ್ಣಗೊಳಿಸಿರುವ ಎಎಸ್ಐನ ತಂಡ ಹೆಚ್ಚಿನ ಪರಿಶೋಧನೆಗಾಗಿ ಈ ವರ್ಷಾಂತ್ಯದಲ್ಲಿ ಮೂರನೇ ಬಾರಿ ಸಮುದ್ರದಾಳಕ್ಕಿಳಿಯಲಿದೆ.
ಫೆಬ್ರವರಿಯಲ್ಲಿ ಪ್ರಾರಂಭವಾದ ಅಧ್ಯಯನದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಂಡರ್‌ವಾಟರ್ ಆರ್ಕಿಯಾಲಜಿ ವಿಭಾಗವು ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿ ಕಡಲೊಳಗೆ ಮತ್ತು ಕರಾವಳಿಯಲ್ಲಿ ಎರಡು ಹಂತಗಳಲ್ಲಿ ಪರಿಶೋಧನೆ ನಡೆಸಿತ್ತು.
ದ್ವಾರಕಾವು ಭಾರತದ ಮುಖ್ಯ ಭೂಭಾಗದ ಪಶ್ಚಿಮದ ತುದಿ ಮತ್ತು ಕಚ್ ಕೊಲ್ಲಿ ಅರೇಬಿಯನ್ ಸಮುದ್ರಕ್ಕೆ ತೆರೆದುಕೊಳ್ಳುವ ಸ್ಥಳದ ದಕ್ಷಿಣಕ್ಕಿದೆ. ಶಂಕೋಧರ್ ಎಂದೂ ಕರೆಯಲ್ಪಡುವ ಬೆಟ್ ದ್ವಾರಕಾ, ದ್ವಾರಕಾದ ಈಶಾನ್ಯಕ್ಕೆ ಸುಮಾರು 25 ಕಿ.ಮೀ ದೂರದಲ್ಲಿರುವ ಓಖಾ ಪಟ್ಟಣದ ಹೊರಗೆ ಕಚ್ ಕೊಲ್ಲಿಯ ಮುಂಭಾಗದಲ್ಲಿರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.