Bangalore, ಏಪ್ರಿಲ್ 26 -- ಜೀ ಕನ್ನಡ ವಾಹಿನಿಯ ಶ್ರಾವಣಿ ಸುಬ್ರಹ್ಮಣ್ಯಸೀರಿಯಲ್‌ನಲ್ಲಿ ಅತ್ತೆಯಾಗಿ ಸಾಮಾನ್ಯ ಸೀರೆಯಲ್ಲಿ ಇರುತ್ತಿದ್ದ ಕಾಂತಮ್ಮ ಇದೀಗ ಮಾಡರ್ನ್‌ ಲುಕ್‌ನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸುಂದರ ಕೂಡ ಟಿಪ್‌ಟಾಪ್‌ ಉಡುಗೆ ತೊಟ್ಟು ರೀಲ್ಸ್‌ ಮಾಡಲು ಹೊರಟಿದ್ದಾರೆ. ಕಂಪನಿ ಜತೆ ಡೀಲ್‌ ಮಾಡಲು ಇವರಿಬ್ಬರು ಹೊಸ ಸ್ಟೈಲ್‌ ಮಾಡಿಕೊಂಡಿದ್ದಾರೆ.

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಇವರಿಬ್ಬರು ತಮ್ಮ ವೇಷ ಬದಲಾಯಿಸಲು ಕಾರಣವಿದೆ. ಮಿನಿಸ್ಟರ್ ಹೆಸರು ಹೇಳಿಕೊಂಡು ಡೀಲ್‌ಗೆ ಇಳಿಯುತ್ತಾರೆ ಕಾಂತಮ್ಮ-ಸುಂದರ.

ಇವರನ್ನು ಬಕ್ರಾ ಎಂದುಕೊಳ್ಳುವ ಡಿಜಿಟಲ್ ಸ್ಲೇಟ್ ಮಾಡುವ ಕಂಪನಿ ಓನರ್‌ 200 ರೂ ಸ್ಲೇಟ್ 100 ರೂಗೆ ಸೇಲ್ ಮಾಡಿ ಕೊಡಿ. 50 ಪರ್ಸೆಂಟ್ ಕಮಿಷನ್ ಎಂದು ಆಸೆ ತೋರಿಸುತ್ತಾನೆ.

ಮಿನಿಸ್ಟರ್ ಹೇಳಿದ್ದು ಎಂದರೆ ಈ ಸ್ಲೇಟ್ ಖಂಡಿತ ಹೆಚ್ಚು ಸೇಲ್ ಆಗುತ್ತದೆ ಎಂದು ಕೂಡ ಹೇಳುತ್ತಾನೆ. ಆದರೆ ಅವೆಲ್ಲವೂ ರಿಜೆಕ್ಟ್ ಆಗಿರುವ ಪೀಸ್‌ಗಳಾಗಿರುತ್ತವೆ.

ಆ ಕಂಪನಿ ಓನರ್‌ಗೆ ಹೇಗಾದ್ರೂ ಪ್ರಾಡಕ್ಟ್ ಸೇಲ್ ಆ...