ಭಾರತ, ಜನವರಿ 31 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 30ರ ಸಂಚಿಕೆಯಲ್ಲಿ ಸುಬ್ಬುವನ್ನು ಸ್ಟೇಷನ್‌ಗೆ ಕರೆದುಕೊಂಡು ಬಂದ ಇನ್ಸ್‌ಪೆಕ್ಟರ್ ಸುಬ್ಬು ಮುಂದೆ ದರ್ಪ ತೋರುತ್ತಾನೆ. ಮಿನಿಸ್ಟರ್ ಮಗಳನ್ನು ಸುಬ್ಬು ಕಿಡ್ನಾಪ್ ಮಾಡಿದ್ದಾನೆ ಎಂದು ಹೇಳಿ, ಅವನನ್ನು ನಿಂದಿಸುವ ಜೊತೆಗೆ ಲಾಠಿ ಹಿಡಿದು ಹೊಡೆಯಲು ಮುಂದಾಗುತ್ತಾನೆ. ಅಷ್ಟೊತ್ತಿಗೆ ಸ್ಟೇಷನ್ ಮೆಟ್ಟಿಲು ತುಳಿದು ಒಳ ಬರುವ ಶ್ರಾವಣಿ ಇನ್ಸ್‌ಪೆಕ್ಟರ್‌ಗೆ ಕಾನೂನು ಪಾಠ ಮಾಡುತ್ತಾಳೆ.

ಇನ್ಸ್‌ಪೆಕ್ಟರ್ ಮುಂದೆ ಸುಬ್ಬು ಪರ ಮಾತನಾಡುವ ಶ್ರಾವಣಿ ಯಾವ ಕಾರಣಕ್ಕೆ ಅವನನ್ನು ಅರೆಸ್ಟ್ ಮಾಡಿದ್ದೀರಾ, ಅರೆಸ್ಟ್ ವಾರಂಟ್ ಎಲ್ಲಿದೆ, ಸುಬ್ಬುವನ್ನು ಅರೆಸ್ಟ್ ಮಾಡಲು ಕಂಪ್ಲೇಂಟ್‌ ಕೊಟ್ಟಿದ್ದು ಯಾರು ಎಂದೆಲ್ಲಾ ಪ್ರಶ್ನಿಸುತ್ತಾಳೆ. ಅಲ್ಲದೇ ಕಾನೂನಿನ ನೀತಿ ನಿಯಮಗಳ ಬಗ್ಗೆ ಇನ್ಸ್‌ಪೆಕ್ಟರ್‌ಗೆ ಪಾಠ ಮಾಡುತ್ತಾಳೆ. ಆರಂಭದಲ್ಲಿ ಅವಳು ಯಾರು ಎಂಬುದು ತಿಳಿದಿಲ್ಲದ ಇನ್ಸ್‌ಪೆಕ್ಟರ್ ಅವಳ ಬಳಿ ಜೋರಿನಿಂದ ಮಾತನಾಡುತ್ತಾನೆ. ಸುಬ್ಬು ನನ್ನ ಗಂಡ ಅನ್ನುವ ಹಕ್ಕಿನಲ್ಲಿ ನಾನು ಮಾತನಾಡುತ್...