ಭಾರತ, ಜನವರಿ 28 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 27ರ ಸಂಚಿಕೆಯಲ್ಲಿ ಶ್ರಾವಣಿಗೆ ಮದುವೆ ಮಂಟಪಕ್ಕೆ ಹೋಗಲು ಖುಷಿಯೇ ಇಲ್ಲ. ಇನ್ನೇನು ಮದುವೆಗೆ 5 ನಿಮಿಷ ಇದೆ ಎನ್ನುವಾಗಲೂ ಶ್ರಾವಣಿ ತನ್ನ ಹೆತ್ತಮ್ಮನ ಬಳಿ ಏನಾದ್ರೂ ದಾರಿ ತೋರಿಸು ಅಮ್ಮ, ಈ ಮದುವೆ ನಿಲ್ಲಿಸು ಎಂದು ಬೇಡಿಕೊಳ್ಳುತ್ತಾಳೆ. ಈಗಲೂ ಶ್ರಾವಣಿಗೆ ಕಾಣದ ಅಮ್ಮ ಬಂದು ಸಹಾಯ ಮಾಡುತ್ತಾಳೆ ಎನ್ನುವ ನಂಬಿಕೆ ಇರುತ್ತದೆ. ಪಿಂಕಿ ಬಂದು ಮದುವೆ ಮಂಟಪಕ್ಕೆ ಕರೆದರೂ ಹೋಗದ ಶ್ರಾವಣಿ ಬಾಗಿಲು ಹಾಕಿಕೊಂಡು ತನ್ನ ಮುಂದಿನ ಜೀವನ ಏನಾಗಬಹುದು ಎಂದು ಯೋಚಿಸುತ್ತಿರುತ್ತಾಳೆ.

ಮದುವೆ ಮಂಟಪದಲ್ಲಿ ಎಲ್ಲರ ಕಣ್ತಪ್ಪಿಸಿ ರೌಡಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ಪ್ರಥ್ವಿರಾಜ್‌ಗೆ ಹೇಗಾದರೂ ಮಾಡಿ ತನ್ನ ಕೈಯಲ್ಲಿರುವ ನಂದಿನಿಯಮ್ಮನ ತಾಳಿಯನ್ನು ಶ್ರಾವಣಿಗೆ ಕೊಡಬೇಕು ಅಂತಿರುತ್ತದೆ. ಆದರೆ ಯಾವ ಕೋಣೆಗೆ ಹೋದ್ರು ಅವನಿಗೆ ಶ್ರಾವಣಿ ಕೋಣೆ ಕಾಣಿಸುವುದಿಲ್ಲ. ಈ ನಡುವೆ ರೌಡಿಗಳು ಅವನನ್ನು ಹುಡುಕಿ ಮಂಟಪದ ಒಳಗೆ ಬಂದಿರುತ್ತಾರೆ. ದಾರಿ ಕಾಣದೆ ನಿಂತಿದ್ದ ಪೃಥ್ವಿರಾಜ್ ಎದುರು ದೇವರಂ...