ಭಾರತ, ಏಪ್ರಿಲ್ 26 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 25ರ ಸಂಚಿಕೆಯಲ್ಲಿ ಆಸ್ತಿಯೆಲ್ಲಾ ಶ್ರಾವಣಿ ಕೈ ಸೇರಿರುವುದರ ಜೊತೆಗೆ ಪ್ರಥ್ವಿರಾಜ್‌ ಆಸ್ತಿ ವಿಚಾರ, ವಿಲ್ ವಿಚಾರ ಮಾತನಾಡುತ್ತಿರುವುದು ವಿಜಯಾಂಬಿಕಾಗೆ ಸಿಕ್ಕಾಪಟ್ಟೆ ಕೋಪ ತರಿಸಿರುತ್ತದೆ. ಪ್ರಥ್ವಿರಾಜ್‌ನನ್ನು ತಾನು ಇಂದು ಕೊಂದೇ ಬಿಡುತ್ತೇನೆ ಎಂದು ಸಿಟ್ಟಿನಿಂದ ಗಾಡಿ ಓಡಿಸಿಕೊಂಡು ಹೋಗುತ್ತಿರುತ್ತಾಳೆ. ಆದರೆ ಅವಳಿಗೆ ಅನಿರೀಕ್ಷಿತವಾಗಿ ಕಣ್ಣಿಗೆ ಬೀಳುತ್ತಾಳೆ ನಂದಿನಿ. ಒಮ್ಮೆಲೆ ಶಾಕ್ ಆಗುವ ವಿಜಯಾಂಬಿಕಾ ಕಾರ್‌ಗೆ ಬ್ರೇಕ್ ಹಾಕಿ ಹೊರಗೆ ಇಳಿದು, ನಂದಿನಿ ಹಿಂದೆ ಹೋಗುತ್ತಾಳೆ. ಆದರೆ ಅಷ್ಟರಲ್ಲಿ ಆಕೆ ಕಾರ್ ಹತ್ತಿ ಹೊರಟು ಬಿಡುತ್ತಾಳೆ.

ಮಿನಿಸ್ಟರ್ ಹೆಸರು ಹೇಳಿಕೊಂಡು ಡೀಲ್‌ಗೆ ಇಳಿಯುತ್ತಾರೆ ಕಾಂತಮ್ಮ-ಸುಂದರ. ಇವರನ್ನು ಬಕ್ರಾ ಎಂದುಕೊಳ್ಳುವ ಡಿಜಿಟಲ್ ಸ್ಲೇಟ್ ಮಾಡುವ ಕಂಪನಿ ಓನರ್‌ 200 ರೂ ಸ್ಲೇಟ್ 100 ರೂಗೆ ಸೇಲ್ ಮಾಡಿ ಕೊಡಿ. 50 ಪರ್ಸೆಂಟ್ ಕಮಿಷನ್ ಎಂದು ಆಸೆ ತೋರಿಸುತ್ತಾನೆ. ಮಿನಿಸ್ಟರ್ ಹೇಳಿದ್ದು ಎಂದರೆ ಈ ಸ್ಲೇಟ್ ಖಂಡಿತ ಹೆಚ್ಚು ಸೇ...