ಭಾರತ, ಏಪ್ರಿಲ್ 18 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 17ರ ಸಂಚಿಕೆಯಲ್ಲಿ ಅತ್ತೆಗೆ ಹುಷಾರಿಲ್ಲ ಎಂದು ಆಕೆಯನ್ನು ಬಿಟ್ಟು ಕದಲುವುದಿಲ್ಲ ಶ್ರಾವಣಿ. ಪದೇ ಪದೇ ತಣ್ಣೀರು ಬಟ್ಟೆ ಬದಲಿಸುತ್ತಾ, ಆಕೆಯ ಆರೈಕೆ ಮಾಡುತ್ತಾಳೆ. ಎಬ್ಬಿಸಿ ಜ್ಯೂಸ್ ಕುಡಿಸಿ ಮಲಗಿಸುವ ಶ್ರಾವಣಿ ಅತ್ತೆ ನಿಮಗೆ ಜ್ವರದಿಂದ ಮೈ ಕೈ ನೋವು ಶುರುವಾಗಿರಬಹುದು, ನಾವು ನಿಮ್ಮ ಕಾಲು ಒತ್ತುತ್ತೇನೆ ಎಂದು ಕಾಲು ಒತ್ತಲು ಶುರು ಮಾಡುತ್ತಾಳೆ. ಅಲ್ಲಿಯವರೆಗೆ ಸುಮ್ಮನೆ ಇದ್ದ ವಿಶಾಲು ತಡೆಯದೇ 'ಶ್ರಾವಣಿಯಮ್ಮ ಬೇಡಿ ಶ್ರಾವಣಿಯಮ್ಮ' ಎಂದು ಅಳುತ್ತಾ ಎದ್ದು ಕುಳಿತುಕೊಳ್ಳುತ್ತಾಳೆ. ಮದುವೆಯಾದ ಮೇಲೆ ಮೊದಲ ಬಾರಿಗೆ ಅತ್ತೆ ಬಾಯಿಂದ ಶ್ರಾವಣಿಯಮ್ಮ ಎಂದು ಕೇಳಿಸಿಕೊಂಡು ಶ್ರಾವಣಿಗೆ ಸ್ವರ್ಗವೇ ಸಿಕ್ಕಂತಾಗುತ್ತದೆ.

ಅತ್ತೆ ನೀವು ನಿಜಕ್ಕೂ ನನ್ನ ಶ್ರಾವಣಿಯಮ್ಮ ಎಂದು ಕರೆದ್ರಾ ಎಂದು ಕೇಳುತ್ತಾ ಜೋರಾಗಿ ಅಳುತ್ತಾಳೆ ಶ್ರಾವಣಿ. ಅದಕ್ಕೆ ವಿಶಾಲು 'ಹೌದು ಶ್ರಾವಣಿಯಮ್ಮ, ನಾನು ನಿಮ್ಮನ್ನು ತುಂಬಾ ತಪ್ಪಾಗಿ ಅರ್ಥ ಮಾಡ...