ಭಾರತ, ಏಪ್ರಿಲ್ 10 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 8ರ ಸಂಚಿಕೆಯಲ್ಲಿ ವಿಶಾಲಾಕ್ಷಿ ತಲೆ ಕೆಡಿಸಿ ಅವಳ ಬಾಯಿಂದ ಸುಬ್ಬು-ಶ್ರಾವಣಿ ಹನಿಮೂನ್‌ಗೆ ಹೋಗದಂತೆ ತಡೆಯಬೇಕು ಎಂದುಕೊಂಡ ಕಾಂತಮ್ಮನ ಪ್ಲಾನ್ ಫ್ಲಾಪ್ ಆಗುತ್ತೆ. ಸೊಸೆಯನ್ನು ಮನಸಾರೆ ಒಪ್ಪಿಕೊಂಡಿರುವ ವಿಶಾಲಾಕ್ಷಿ ಮಗ-ಸೊಸೆ ಒಟ್ಟಾಗಿ ಹನಿಮೂನ್‌ಗೆ ಹೋಗಿ ಬರಲಿ ಎಂದು ಬಯಸುತ್ತಾರೆ. ಆದರೆ ಕಾಂತಮ್ಮ-ಸುಂದರನ ಎದುರು ಸುಬ್ಬು-ಶ್ರಾವಣಿ ಮೇಲೆ ಕೋಪ ಬಂದಂತೆ ನಟಿಸುತ್ತಾರೆ. ಕೋಪದಲ್ಲೇ ಯಾರು ಎಲ್ಲಿಗಾದ್ರೂ ಹೋಗ್ಲಿ ನಂಗೇನು ಅಂತ ಹೇಳ್ತಾರೆ.

ವರದ ಬೆಳಗೆದ್ದು ಆಫೀಸ್‌ಗೆ ಹೊರಟಾಗ ತಿಂಡಿ ಬಾಕ್ಸ್ ಹಿಡಿದು ಬರುತ್ತಾಳೆ ವರಲಕ್ಷ್ಮೀ. ಅಷ್ಟೊತ್ತಿಗೆ ಸುಬ್ಬು ಹಾಗೂ ಶ್ರಾವಣಿ ವರದನ ಮನೆಗೆ ಬರುತ್ತಾರೆ. ಅವರನ್ನು ನೋಡಿ ವರದ ಅಮ್ಮನನ್ನು ಕರೆಯುತ್ತಾನೆ. ಸುಬ್ಬು-ಶ್ರಾವಣಿಯನ್ನು ನೋಡಿ ದರ್ಪದಲ್ಲಿ ಏನು ಎಂದು ಕೇಳುವ ಇಂದ್ರಮ್ಮನ ಬಳಿ ಯಜಮಾನ್ರರು ಹನಿಮೂನ್‌ಗೆ ಎಂದು ಹೇಳಲು ಶುರು ಮಾಡುತ್ತಾನೆ ಸುಬ್ಬು. ಅವರ ಮಾತನ್ನು ಅರ್ಧ...