ಭಾರತ, ಮೇ 14 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 13ರ ಸಂಚಿಕೆಯಲ್ಲಿ ತಾನು ಡಿಕ್ಕಿ ಹೊಡೆದ ಕಾರು ವಿಜಯಾಂಬಿಕಾದು ಎಂದು ತಿಳಿದು ಗಾಬರಿಯಲ್ಲಿ ಎದ್ದು ನಿಂತು ಕ್ಷಮೆ ಕೇಳುತ್ತಾನೆ ಸುಂದರ. ತನ್ನ ಪರಿಚಯ ಹೇಳಿಕೊಂಡ ಸುಂದರನನ್ನು ನೋಡಿ ನಿಂಗೇನು ಬಂದಿರೋದು ರೋಗ, ಸಾಯೋಕೆ ನಿಂಗೆ ನನ್ನ ಕಾರೇ ಬೇಕಿತ್ತಾ, ಅಷ್ಟಕ್ಕೂ ಸಾಯೋವಂಥದ್ದು ನಿನಗೆ ಏನಾಗಿದೆ ಎಂದು ವಿಜಯಾಂಬಿಕಾ ಕೇಳುತ್ತಾಳೆ. ಆಗ ಸುಂದರ ಮೇಡಂ ನನ್ನ ಬಗ್ಗೆ ಏನು ಅಂತ ಹೇಳ್ಲಿ. ಮನೆಯಲ್ಲಿ ನೆಮ್ಮದಿಯಿಲ್ಲ, ನೆಮ್ಮದಿ ಬೇಕು ಅಂದ್ರೆ ಕೆಲಸ ಬೇಕು, ಕೆಲಸ ಹುಡುಕಿದ್ರೆ ಸಿಗ್ತಾ ಇಲ್ಲ. ಅದಕ್ಕೆ ಯಾರಾದ್ರೂ ಶ್ರೀಮಂತರ ಕಾರಿಗೆ ಡಿಕ್ಕಿ ಹೊಡೆದು ಅವರ ಕೈಕಾಲು ಹಿಡಿದು ಕೆಲಸ ಗಿಟ್ಟಿಸಿಕೊಳ್ಳುವ ಅಂತ ಹೀಗೆ ಮಾಡಿದೆ. ನಿಮ್ಮ ಮನೆಯ ಮಗಳು ನಮ್ಮ ಮನೆಗೆ ಬಂದ ಮೇಲೆ ನನಗೆ ನೆಮ್ಮದಿಯೇ ಇಲ್ಲದಂತಾಗಿದೆ. ಅವಳಿಂದ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ ಎಂದು ಶ್ರಾವಣಿಯನ್ನು ದೂರುತ್ತಾನೆ. ಇದನ್ನು ಕೇಳಿದ ರೌಡಿ ವಿಜಯಾಂಬಿಕಾ ಹಾಳು ತಲೆಯಲ್ಲಿ ಇಲ್ಲದ ಯೋಚನೆಗಳು ಓಡಿದರೂ ಅದರ ಬಗ್ಗೆ ಯೋ...