ಭಾರತ, ಮಾರ್ಚ್ 15 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 13ರ ಸಂಚಿಕೆಯಲ್ಲಿ ತಮ್ಮ ಸುರೇಂದ್ರನ ಬಳಿ ವೀರೇಂದ್ರ ಮನವಿಯೊಂದನ್ನು ಮಾಡುತ್ತಾರೆ. ಶ್ರಾವಣಿಗೆ ಕರೆ ಮಾಡಿ ಮನೆಗೆ ಬರಲು ಹೇಳಿ, ಆಸ್ತಿ ರಿಜಿಸ್ಟ್ರೇಷನ್ ಮುಗಿಸಿ ಬಿಡೋಣ ಎಂದು ಹೇಳುತ್ತಾರೆ. ಅಣ್ಣನ ಮಾತು ಕೇಳಿದ ಸುರೇಂದ್ರ 'ಅಯ್ಯೋ ಅಣ್ಣ, ಇದಕ್ಕೆಲ್ಲಾ ರಿಕ್ವೆಸ್ಟ್ ಮಾಡಿಕೊಳ್ತಾರಾ, ನಾನು ನಾಳೆ ಬೆಳಿಗ್ಗೆಯೇ ಅವಳಿಗೆ ಕಾಲ್ ಮಾಡಿ ಸುಬ್ಬು ಜೊತೆ ಮನೆಗೆ ಬರಲು ಹೇಳುತ್ತೇನೆ' ಎಂದು ಹೇಳಿ ಶ್ರಾವಣಿಯನ್ನು ಮನೆಗೆ ಆಹ್ವಾನಿಸಲು ಸಿದ್ಧರಾಗುತ್ತಾರೆ. ಇತ್ತ ಶ್ರಾವಣಿ ಸುಬ್ಬು ಮನದಲ್ಲಿ ತಾಯಿ ಮಾತನಾಡಿಸುತ್ತಿಲ್ಲ ಎನ್ನುವ ದುಃಖ ದೂರ ಮಾಡಲು ಚಳಿಯಾಗುತ್ತಿರುವ ನಾಟಕ ಮಾಡುತ್ತಾಳೆ. ಸುಬ್ಬು ಬೆಡ್‌ಶೀಟ್ ಎಲ್ಲಾ ತಂದು ಹೊದೆಸಿ ಶ್ರಾವಣಿಯ ಆರೈಕೆ ಮಾಡುತ್ತಾನೆ. ಇದರಿಂದ ಸುಬ್ಬು ಯೋಚನೆಗಳು ಬದಲಾಯ್ತು, ಅವನಿನ್ನು ನೆಮ್ಮದಿಯಿಂದ ಮಲಗಬಹುದು ಎಂದು ಶ್ರಾವಣಿ ಖುಷಿ ಪಡುತ್ತಾಳೆ.

ಬೆಳಗೆದ್ದು ಮನೆ ಒರೆಸುತ್ತಿದ್ದ ಶ್ರಾವಣೆಯನ್ನ...