ಭಾರತ, ಫೆಬ್ರವರಿ 28 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 27ರ ಸಂಚಿಕೆಯಲ್ಲಿ ಸುಬ್ಬುವನ್ನು ದ್ವೇಷ ಮಾಡುವ ಸುರೇಂದ್ರ ಹಾಗೂ ವೀರೇಂದ್ರಗೆ 'ಸುಬ್ಬು ತಪ್ಪಿಲ್ಲ, ಇದೆಲ್ಲವೂ ದೇವರಿಚ್ಛೆಯಂತೆ ನಡೆದಿರುವುದು. ನಾವೆಲ್ಲರೂ ವೀರೇಂದ್ರನ ಜೊತೆಗೆ ಇದ್ದರೂ ಆವತ್ತು ಅವನ ಪ್ರಾಣ ಕಾಪಾಡಿದ್ದು ಸುಬ್ಬು, ಇದಕ್ಕೆ ಋಣಾನುಬಂಧವೇ ಕಾರಣ' ಎಂದು ಹೇಳಿ ಸುಬ್ಬುಗೂ ವೀರುಗೂ ಏನೋ ನಂಟಿರುವ ಕಾರಣಕ್ಕೆ ಅವರು ಜೊತೆಯಾಗಿದ್ದು ಎಂದು ಹೇಳುವ ಲಲಿತಾದೇವಿ ಸುಬ್ಬುವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿವಾದವನ್ನೂ ಹೇಳುತ್ತಾರೆ. ಅತ್ತೆಯ ಮಾತು ಕೇಳಿ ಕೊಂಚ ಬದಲಾಗುವ ವೀರೇಂದ್ರ ಸುಬ್ಬು ಕೈಯಿಂದ ಮಾತ್ರೆ ಪಡೆದು ತಿನ್ನುತ್ತಾರೆ.

ತೊಡಲು ಬೇರೆ ಬಟ್ಟೆ ಇಲ್ಲದೇ ಇರುವಾಗ ಮನೆಗೆ ಹೋಗಿ ಬಟ್ಟೆ ತರಲು ನಿರ್ಧಾರ ಮಾಡುತ್ತಾಳೆ ವರಲಕ್ಷ್ಮೀ. ಮನೆಗೆಂದು ಹೊರಟಾಗ ಹಾಲ್‌ನಲ್ಲಿರುವ ಇಂದ್ರಮ್ಮ ಅವಳನ್ನು ತಡೆಯುತ್ತಾರೆ. ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಹೇಳಿದಾಗ ಮನೆಗೆ ಬಟ್ಟೆ ತರಲು ಎನ್ನುತ್ತಾಳೆ. ಆದರೆ ಇಂದ್ರಮ್ಮ ನೀನು ಎಲ್ಲಿಗೂ ಹೋಗಬಾರದು ...