ಭಾರತ, ಏಪ್ರಿಲ್ 29 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 28ರ ಸಂಚಿಕೆಯಲ್ಲಿ ಅಮ್ಮ (ವಿಶಾಲು) ಶ್ರಾವಣಿ ಜೊತೆ ಜಗಳ ಮಾಡೋದು ಕಂಡ ಸುಬ್ಬುಗೆ ಬೇಸರವಾಗುತ್ತದೆ. ಅಮ್ಮನನ್ನು ಕರೆದು ಸಮಾಧಾನದಲ್ಲಿ ಮಾತನಾಡುವ ಸುಬ್ಬು 'ಅಮ್ಮ, ನೀನು ಶ್ರಾವಣಿ ಮೇಡಂಗೆ ಪದೇ ಪದೇ ಬಯ್ಯೋದು ಚೆನ್ನಾಗಿ ಅನ್ಸೊಲ್ಲ. ಅವರು ಈ ಮನೆಗೆ ಬಂದಾಗಿನಿಂದ ನೀನು ಇವರಿಗೆ ಬಯ್ತಾನೆ ಇದೀಯಾ. ಕೆಲವೊಂದು ಕೆಟ್ಟ ಕಾಲ ಇರುತ್ತೆ ಅಮ್ಮ. ಈಗ ನನಗೆ ಕೆಟ್ಟ ಕಾಲ ನಡಿತಿದೆ, ಆದರೆ ಈ ಮನೆಗೆ ಬಂದ ಮೇಲೆ ಶ್ರಾವಣಿ ಮೇಡಂ ಒಂದು ದಿನಾನೂ ಖುಷಿಯಾಗಿ ಇರಲಿಲ್ಲ. ನೀನು ಅಕ್ಕ ಎಲ್ಲದ್ದಕ್ಕೂ ಅವರೇ ಕಾರಣ ಅನ್ನೋ ರೀತಿ ಬಯ್ತೀರಾ. ದಯವಿಟ್ಟು ನೀನು ಅವರಿಗೆ ಪದೇ ಪದೇ ಬ‌ಯ್ಯೋದು ನಿಲ್ಲಿಸಮ್ಮ, ನಮ್ಮ ಕೆಟ್ಟ ಟೈಮ್ ಕಳೆದ ಮೇಲೆ ಎಲ್ಲಾ ಸರಿಯಾಗುತ್ತೆ' ಅಂತ ಅಮ್ಮನಿಗೆ ಸಮಾಧಾನ ಮಾಡುತ್ತಾನೆ. ಮಗನ ಮಾತು ಕೇಳಿ ಮನಸ್ಸಲ್ಲೇ ಖುಷಿ ಪಡುವ ವಿಶಾಲು ಮಗನಿಗೂ ಸೊಸೆ ಮೇಲೆ ಪ್ರೀತಿಯಾಗಿದೆ ಎಂದುಕೊಳ್ಳುತ್ತಾರೆ. ಆದರೆ ಮೇಲ್ನೋಟಕ್ಕೆ ಅದನ್ನು ತೋರಿಸದೇ 'ನಂಗೆ ಹೇಗೆ ಇರಬೇಕು ಅಂತ ನೀನು...