ಭಾರತ, ಫೆಬ್ರವರಿ 7 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 6ರ ಸಂಚಿಕೆಯಲ್ಲಿ ತನ್ನಿಂದಾದ ತಪ್ಪುಗಳ ಬಗ್ಗೆ ಯೋಚಿಸುತ್ತಾ ಕುಳಿತ ಶ್ರಾವಣಿ ಕಣ್ಣೀರು ಹಾಕುತ್ತಿರುತ್ತಾಳೆ. ಅವಳನ್ನು ನೋಡಿ ಬೇಸರ ಪಟ್ಟುಕೊಳ್ಳುವ ಪದ್ಮನಾಭ ಅವಳ ಬಳಿ ಬಂದು 'ಶ್ರಾವಣಿ ಅಮ್ಮೋರೇ, ಯಾವುದಕ್ಕೂ ಚಿಂತೆ ಮಾಡಬೇಡಿ, ಇದೆಲ್ಲವೂ ವಿಧಿ ಲಖಿತ. ಇದನ್ನು ನಿಮ್ಮಿಂದಾಗಿದ್ದು ಎಂದು ಯಾವುದೇ ಕಾರಣಕ್ಕೂ ಅಂದುಕೊಳ್ಳಬೇಡಿ' ಎಂದು ಸಮಾಧಾನ ಮಾಡುತ್ತಾರೆ. 'ಹೋಗಿ ಸ್ನಾನ ಮಾಡಿ ಬಟ್ಟೆ ಬದಲಿಸಿ, ನೀವು ಈ ಮನೆಯ ಸೊಸೆ, ಈ ಮನೆಯ ಮಹಾಲಕ್ಷ್ಮೀ' ಎಂದೆಲ್ಲಾ ಹೇಳುತ್ತಾರೆ. ಆಗ ಶ್ರಾವಣಿ ತನ್ನ ಬಳಿ ಸ್ನಾನ ಮಾಡಲು ಸೋಪ್ ಕೂಡ, ಬದಲಿಸಲು ಬಟ್ಟೆ ಕೂಡ ಇಲ್ಲ ಎಂಬುದು ಅರಿವಾಗುತ್ತದೆ. ಅದನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಕಾಂತಮ್ಮ, ಸುಂದರ ಪ್ಲಾನ್ ಮಾಡುತ್ತಾರೆ. ತಾವೇ ಹೋಗಿ ಸೀರೆ, ಸೋಪ್‌, ಶ್ಯಾಂಪೂ ಎಲ್ಲವನ್ನೂ ತರುತ್ತೇವೆ, ನಮ್ಮ ಅಕೌಂಟ್‌ಗೆ ಸ್ವಲ್ಪ ದುಡ್ಡು ಹಾಕಿ ಎಂದು ಕೇಳಿಕೊಳ್ಳುತ್ತಾರೆ.

ಸುಂದರ, ಕಾಂತಮ್ಮ ಹೇಳಿದಂತೆ ಅವರ ಅಕೌಂಟ್‌ಗೆ ದುಡ್ಡು ಹಾಕಿ ತನ...