ಭಾರತ, ಮಾರ್ಚ್ 26 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 25ರ ಸಂಚಿಕೆಯಲ್ಲಿ ವೀರೇಂದ್ರ ತನ್ನ ಮಾತನ್ನು ಕೇಳಿಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾರೆ ಲಲಿತಾದೇವಿ. 'ವೀರು ನೀನು ನಾನು ಹೇಳಿದ ಕೆಲಸವನ್ನು ಬೇರೆಯವರಿಗೆ ಒಪ್ಪಿಸಿದ್ದೀಯಾ, ಇದು ನಂಗೆ ಸರಿ ಕಾಣ್ತಿಲ್ಲ' ಎಂದು ಹೇಳ್ತಾರೆ. ಅದಕ್ಕೆ ವೀರೇಂದ್ರ 'ಇಲ್ಲ ಅತ್ತೆಯವರೇ, ನಾನು ಇವತ್ತೇ ಅವಳಿಗೆ ಕಾಲ್ ಮಾಡಿ ಮನೆಗೆ ಬರೋಕೆ ಹೇಳ್ತೀನಿ' ಅಂತಾರೆ. ಆಗ ಲಲಿತಾದೇವಿ 'ಅದಕ್ಕೆ ತಡ ಯಾಕೆ ಈಗಲೇ ಇಲ್ಲೇ ನನ್ನ ಎದುರೇ ಕಾಲ್ ಮಾಡಿ ಶ್ರಾವಣಿ ಜೊತೆ ಮಾತಾಡು' ಎಂದು ಹಟ ಹಿಡಿದು ಬಿಡುತ್ತಾರೆ. ವೀರೇಂದ್ರಗೆ ಶ್ರಾವಣಿಗೆ ಕಾಲ್ ಮಾಡಲು ಇಷ್ಟ ಇಲ್ಲ ಎಂದರೂ ವಿಧಿಯಿಲ್ಲದೇ ಕಾಲ್ ಮಾಡುವುದು ಮಾತ್ರವಲ್ಲ, ಅತ್ತೆ ಇದ್ದಾರೆ ಎನ್ನುವ ಕಾರಣಕ್ಕೆ ಸಮಾಧಾನದಿಂದ ಮಾತನಾಡಿ 'ಶ್ರಾವಣಿ ಹೇಗಿದಿಯಮ್ಮಾ' ಎಂದು ಉಭಯಕುಶಲೋಪರಿ ವಿಚಾರಿಸುತ್ತಾರೆ. ಅಲ್ಲದೇ ;ನೀನು ಸುಬ್ಬು ಮನೆಗೆ ಬನ್ನಿ' ಎಂದು ಆಹ್ವಾನಿಸುತ್ತಾರೆ. ಅಪ್ಪ ಕಾಲ್ ಮಾಡಿ ಮನೆಗೆ ಬರಲು ಹೇಳಿ...