ಭಾರತ, ಜನವರಿ 27 -- ಬಿವೈ ವಿಜಯೇಂದ್ರ ಅವರು (BY Vijayendra) ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಒಗ್ಗಟ್ಟಿಗಿಂತ ಬಿಕ್ಕಟ್ಟುಗಳೇ ಹೆಚ್ಚುತ್ತಿವೆ. ಪಕ್ಷದ ಆಂತರಿಕ ಬೆಳವಣಿಗೆಗಳನ್ನು ಅವಲೋಕಸಿದರೆ ಅವರ ಹಾದಿ ಸುಗಮವಲ್ಲ ಎನ್ನುವುದು ಕಂಡು ಬರುತ್ತಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಅನೇಕ ಹಿರಿಯ ಬಿಜೆಪಿ ನಾಯಕರು ಮತ್ತೆ ಸ್ಪರ್ಧಿಸುವ ಅನುಮಾನಗಳಿವೆ. ಅಲ್ಲದೆ, ಸುರಕ್ಷಿತ ಎನ್ನುವ ಕ್ಷೇತ್ರಗಳಲ್ಲಿಯೂ ಅನಿಶ್ಚತತೆ ತಲೆದೋರಿದೆ.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು (Shobha Karandlaje) ಮತ್ತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಅನುಮಾನಗಳು ಉಂಟಾಗಿವೆ. ಸಚಿವೆಯಾದ ನಂತರ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಕಡಿಮೆ. ಅದರಲ್ಲೂ ಕಳೆದ ನವಂಬರ್​​ನಲ್ಲಿ ವಿಜಯೇಂದ್ರ ರಾಜ್ಯದ ಚುಕ್ಕಾಣಿ ಹಿಡಿದ ನಂತರ ಚಿಕ್ಕಮಗಳೂರಿಗೆ ಬಿಡಿ, ರಾಜ್ಯಕ್ಕೆ ನೀಡುತ್ತಿರುವ ಭೇಟಿಯೂ ಅಪರೂಪವಾಗಿದೆ.

ಉ...