ಭಾರತ, ಜೂನ್ 22 -- ಘಟನೆ 1: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರುವವರೆಗೂ ಪಿಯು ಕಾಲೇಜುಗಳ ಪ್ರವೇಶ ಪ್ರಕ್ರಿಯೆ ನಡೆಸಕೂಡದು ಎನ್ನುವ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿತ್ತು. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ಕೂಡ ನೀಡಲಾಗಿತ್ತು. ಆ ಸಂದರ್ಭದಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ಇಬ್ಬರು ಪ್ರತಿಷ್ಠಿತ ಸಂಸ್ಥೆಗಳ ಒತ್ತಡಕ್ಕೆ ಮಣಿದ ಪ್ರಭಾವಿ ಸಚಿವರೊಬ್ಬರು, ಅಧಿಕಾರಿಗಳನ್ನು ಕರೆಯಿಸಿಕೊಂಡರು. ʼಇವರು ನಮ್ಮವರು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ' ಎನ್ನುವ ಮೌಖಿಕ ಎಚ್ಚರಿಕೆ ನೀಡಿದರು. ಸಚಿವರಿಂದ ಅವಾಜು ಹಾಕಿಸಿದ ಶಿಕ್ಷಣ ಸಂಸ್ಥೆಗಳು ಲಕ್ಷ ಲಕ್ಷ ರೂಪಾಯಿ ಶುಲ್ಕ ಏರಿಸಿಕೊಂಡು, ಯಾವುದೇ ನಿಯಮ ಸಂಬಂಧವಿಲ್ಲದಂತೆ ಹಣ ವಸೂಲಿ ಮಾಡಿದವು.

ಘಟನೆ 2: ಹಾಲಿ ಶಾಸಕ ಪ್ರದೀಪ್‌ ಈಶ್ವರ್‌ ಹೇಳುವಂತೆ ಬೆಂಗಳೂರಿಗೆ ಕೇವಲ 500 ಹಿಡಿದುಕೊಂಡು ಬಂದು, ಇಂದು 300 ಕೋಟಿ ಸಾಮ್ರಾಜ್ಯ ಕಟ್ಟಿದ್ದಾರೆ. ಜಗತ್ತಿನ ಯಾವುದೇ ವಿಷಯಗಳ ಬಗ್ಗೆ ಮಾತನಾಡುವ ಈ ವ್ಯಕ್ತಿಯ ಕೋಚಿಂಗ್‌ ಸೆಂಟರ್‌ನ ಶುಲ್ಕವನ್ನು ಕೇಳಿದರೆ ತಲೆ ತಿರುಗಿ ಹೋಗುತ...