Bengaluru, ಮಾರ್ಚ್ 14 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಗುಂಡಣ್ಣನನ್ನು ಶಾಲೆಗೆ ಬಿಡಲು ಭಾಗ್ಯ ಹೋಗಿದ್ದಾಳೆ. ಆ ಸಂದರ್ಭದಲ್ಲಿ ಗುಂಡಣ್ಣನ ಬ್ಯಾಗ್‌ನಲ್ಲಿ ಶೂ ಪಾಲೀಶ್ ಕಿಟ್ ಸಿಕ್ಕಿದೆ. ಅದನ್ನು ನೋಡಿ ಅವಳಿಗೆ ಅನುಮಾನ ಬಂದಿದೆ. ಯಾಕೋ ಗುಂಡಣ್ಣ ಇದನ್ನೆಲ್ಲಾ ಬ್ಯಾಗ್‌ಗೆ ಹಾಕಿಕೊಂಡಿದ್ದೀ ಎಂದು ಕೇಳುತ್ತಾಳೆ. ಆಗ ಗುಂಡಣ್ಣ, ಅದು ನಾನು ಹಾಕಿಕೊಂಡಿಲ್ಲ, ಹೇಗೋ ಸೇರಿಕೊಂಡಿರಬೇಕು, ಇರಲಿ, ಸಂಜೆ ವಾಪಸ್ ತಂದು ಇಡುತ್ತೇನೆ ಎಂದು ಹೇಳುತ್ತಾನೆ. ಆದರೆ ಭಾಗ್ಯ, ಅದನ್ನೆಲ್ಲಾ ಸ್ಕೂಲ್‌ಗೆ ತೆಗೆದುಕೊಂಡು ಹೋಗಬಾರದು, ಇಲ್ಲಿ ಕೊಡು, ನಾನೇ ತೆಗೆದುಕೊಂಡು ಹೋಗುತ್ತೇನೆ ಎಂದು ವಾಪಸ್ ತೆಗೆದುಕೊಂಡು ಹೋಗುತ್ತಾಳೆ. ಗುಂಡಣ್ಣ ಪೆಚ್ಚು ಮೋರೆ ಹಾಕಿಕೊಂಡು ನಿಲ್ಲುತ್ತಾನೆ.

ಶೂ ಪಾಲೀಶ್ ಕಿಟ್ ತೆಗೆದುಕೊಂಡು ಹೋಗಿ ಅದರಿಂದ ಸ್ವಲ್ಪ ಹಣ ಸಂಪಾದಿಸುತ್ತೇನೆ, ಅಮ್ಮನಿಗೆ ಸಹಾಯವಾಗಬಹುದು ಎಂದುಕೊಂಡಿದ್ದ ಗುಂಡಣ್ಣನಿಗೆ ಈಗ ನಿರಾಸೆಯಾಗಿದೆ. ಅವನು ಮುಂದೇನು ಮಾಡುವುದು ಎಂದು ಯೋಚಿಸುತ್...