ಭಾರತ, ಫೆಬ್ರವರಿ 25 -- ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಎ ಪಂದ್ಯದ 18ನೇ ಓವರ್​​ನಲ್ಲಿ ಭಾರತದ ಆರಂಭಿಕ ಬ್ಯಾಟರ್​ ಶುಭ್ಮನ್ ಗಿಲ್ ಅವರನ್ನು ತಮ್ಮ ಸ್ಪಿನ್ ಮೋಡಿಯಿಂದ ಕ್ಲೀನ್ ಬೋಲ್ಡ್ ಮಾಡಿದ್ದ ಪಾಕಿಸ್ತಾನದ ಸ್ಪಿನ್ನರ್​ ಅಬ್ರಾರ್ ಅಹ್ಮದ್ ವಿರುದ್ಧ ಈಗಲೂ ಟೀಕೆ, ಟ್ರೋಲ್ ನಿಂತಿಲ್ಲ. ನಿಜ, ಅಬ್ರಾರ್ ಎಸೆತವನ್ನು ಅಂದಾಜಿಸಲು ಆಗದೇ ವಿಕೆಟ್​ ಕೈ ಚೆಲ್ಲಿದ ಗಿಲ್, ಒಂದು ಕ್ಷಣ ನಿಂತಲ್ಲೇ ನಿಂತುಬಿಟ್ಟು ಅಚ್ಚರಿಗೊಳಗಾದರು. ಆದರೆ ಗಿಲ್​ಗೆ ಅಬ್ರಾರ್​ ಕೊಟ್ಟ ವಿಚಿತ್ರ ಸೆಂಡ್​ ಆಫ್ ಅನ್ನು ನೀವೂ ನೋಡಿರುತ್ತೀರಿ ಅಥವಾ ನಿಮ್ಮ ಗಮನಕ್ಕೂ ಬಂದಿರಬಹುದು. ಟ್ರೋಲ್ ಮಾತ್ರ ಇನ್ನೂ ನಿಂತಿಲ್ಲ!

56 ಎಸೆತಗಳಲ್ಲಿ 7 ಬೌಂಡರಿ ಸಹಿತ 46 ರನ್ ಗಳಿಸಿದ್ದ ಶುಭ್ಮನ್ ಗಿಲ್, 18ನೇ ಓವರ್​​ನ 3ನೇ ಎಸೆತದಲ್ಲಿ ಅಬ್ರಾರ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಅಬ್ರಾರ್​ ಅವರ ಲೆಗ್ ಬ್ರೇಕ್ ಬೌಲಿಂಗ್ ಕಂಡ ಗಿಲ್ ಜೊತೆಗೆ ನಾನ್​ಸ್ಟ್ರೈಕ್​ನಲ್ಲಿದ್ದ ವಿರಾಟ್ ಕೊಹ್ಲಿಯೂ ಶಾಕ್ ಆದರು. ವಿಕೆಟ್ ಪಡೆದು ಸಂಭ್ರಮಿಸದ ಅಬ್ರಾರ...