Bangalore, ಮೇ 11 -- ಬೆಂಗಳೂರಿನ ಉತ್ತರಾದಿ ಮಠದಲ್ಲಿ ನರಸಿಂಹ ಜಯಂತಿ ಅಂಗವಾಗಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಮಂತ್ರಾಲಯದ ರಾಯರ ಮಠದಲ್ಲಿ ನಡೆದ ನರಸಿಂಹ ಜಯಂತಿಯಂದು ಶ್ರೀ ಸುಬುದೇಂಧ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಆನಂದ ಜೋಶಿ ಅವರು ನರಸಿಂಹನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ನರಸಿಂಹ ಜಯಂತಿಯ ಪ್ರಯುಕ್ತ ತುಮಕೂರಿನ ದೇವರಾಯನದುರ್ಗ ಯೋಗ ಲಕ್ಷ್ಮೀ ನರಸಿಂಹ ಹಾಗೂ ಭೋಗ ಲಕ್ಷ್ಮೀನರಸಿಂಹ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ವಿಜಯಪುರ ನಗರದ ಹೊರ ವಲಯದಲ್ಲಿರುವ ಇತಿಹಾಸ ಪ್ರಸಿದ್ದ ತೊರವಿ ನರಸಿಂಹ ದೇಗುಲಕ್ಕೆ ಸಚಿವ ಎಂ.ಬಿ.ಪಾಟೀಲ ಭೇಟಿನೀಡಿ ಪೂಜೆ ಸಲ್ಲಿಸಿದರು.

ಕಾರವಾರ ತಾಲೂಕಿನ ದೇವಬಾಗದ ಶ್ರೀ ನರಸಿಂಹ ದೇವರ ನರಸಿಂಹ ಜಯಂತಿ ವಾರ್ಷಿಕ ಮಹೋತ್ಸವದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡರು.

ನರಸಿಂಹಜಯಂತಿ ವೇದವ್ಯಾಸ ಜಯಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಲಗ್ಗೆರೆಯ ಲಕ್...