ಭಾರತ, ಫೆಬ್ರವರಿ 11 -- ದಾಂಪತ್ಯ ಜೀವನದಲ್ಲಿನ ತೊಡಕುಗಳ ನಿವಾರಣೆಗಾಗಿ ಶಿವ-ಪಾರ್ವತಿಯರ ಆರಾಧನೆ ಶ್ರೇಷ್ಠ. ಇಂಥ ದೇವಾಲಯವು ತಮಿಳುನಾಡಿನ ಮೈಲಾಂಡದುರೈ ಜಿಲ್ಲೆಯ ತಿರುಮಂಗಲಕುಡಿ ಎಂಬ ಸ್ಥಳದಲ್ಲಿದೆ. ಈ ದೇವಾಲಯದ ಮುಖ್ಯ ದೈವವು ಪರಮೇಶ್ವರನಾದರೂ ಪಾರ್ವತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿರುವ ಶಿವನನ್ನು ಪ್ರಾಣನಾಥೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಶಿವನು ಲಿಂಗರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ. ಶಿವನ ಪತ್ನಿಯಾದ ಪಾರ್ವತಿಯನ್ನು ಮಂಗಳನಾಯಕಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ಈ ದೇವಾಲಯವು ಬಲು ಪ್ರಾಚೀನ ಕಾಲದ್ದಾಗಿದೆ ಎಂದು ತಮಿಳು ಗ್ರಂಥಗಳು ಹೇಳುತ್ತವೆ. ಇಲ್ಲಿನ ಶಾಸನಗಳು ದೇವಾಲಯ ಬೆಳೆದು ಬಂದ ರೀತಿಯನ್ನು ತಿಳಿಸುತ್ತದೆ. ಈ ದೇವಾಲಯವನ್ನು ಚೋಳರು ನಿರ್ಮಿಸಿದರೂ ಅದರ ವಿಸ್ತರಣೆ ಮತ್ತು ಪುನರುಜ್ಜೀವನವನ್ನು ತಂಜಾವೂರಿನ ನಾಯಕರು ಮಾಡಿದರು. ಈ ದೇವಸ್ಥಾನವನ್ನು ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಕಟ್ಟಲಾಗಿದೆ. ಇದರಿಂದ ಇದು ವಿಶೇಷವಾದ ಶಕ್ತಿಯನ್ನು ಹೊಂದಿದೆ.

ಈ ದೇವಾಲಯದ ಗೋಪುರದ ಕೆಳಭಾಗದಲ...