ಭಾರತ, ಮಾರ್ಚ್ 22 -- Manada Matu Column: ವಿದ್ಯಾರ್ಥಿಗಳ ಯಶಸ್ಸಿಗೆ ಶಿಸ್ತು, ಏಕಾಗ್ರತೆ, ಪರಿಶ್ರಮ, ಪ್ರತಿಭೆ ಮತ್ತು ಬುದ್ಧಿವಂತಿಕೆ ಅತ್ಯವಶ್ಯಕ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಒಬ್ಬ ವಿದ್ಯಾರ್ಥಿಯಲ್ಲಿ ಇವೆಲ್ಲಾ ಅಂಶಗಳು ಇದ್ದೂ, ಆ ಒಂದೇ ಒಂದು ಮಹತ್ವದ ಗುಣ ಇಲ್ಲ ಎಂದಾದರೆ ಅಂತಹ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಾಗಾದರೆ ಕಲಿಕೆ ಮತ್ತು ಯಶಸ್ಸು ಈ ಎರಡಕ್ಕೂ ಬೇಕಾಗಿರುವಂತಹ ಮಹತ್ವದ ಗುಣ ಏನಿರಬಹುದು? ಒಮ್ಮೆ ಯೋಚಿಸಿ. ಓದುಗರಿಗೆ ಈ ಮಹತ್ತರ ಗುಣವನ್ನು ನೇರವಾಗಿ ಹೇಳುವುದಕ್ಕಿಂತ, ಯಶಸ್ಸನ್ನು ಗಳಿಸಿ ನಮ್ಮ ನಡುವೆ ಬದುಕಿ ಬಾಳಿದ ಒಬ್ಬ ಶ್ರೇಷ್ಠ ವ್ಯಕ್ತಿಯ ಹಿಂದಿನ ಕಥೆಯನ್ನು ಹೇಳುವ ಮೂಲಕ ವಿವರಿಸುತ್ತೇನೆ.

ಬಡತನ ತುಂಬಿರುವ ಮನೆಯ ಒಬ್ಬ ಪುಟ್ಟ ಹುಡುಗನಿದ್ದಾನೆ. ಆ ಮನೆಯಲ್ಲಿ ಏಳು ಜನ ಮಕ್ಕಳು. ನಮ್ಮ ಕಥಾನಾಯಕ ಐದನೆಯವನು. ತಂದೆ-ತಾಯಿಗೆ ಮನೆ ನಡೆಸಲು ಸಹಾಯ ಮಾಡಲು ತಾನಿರುವ ಚಿಕ್ಕ ಹಳ್ಳಿಯಲ್ಲಿ ಸುದ್ಧಿಪತ್ರಿಕೆಗಳನ್ನು ಮಾರುತ್ತಿದ್ದ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಶಾಲೆಯಲ್ಲಿ ಬ...