ಭಾರತ, ಫೆಬ್ರವರಿ 25 -- ಮಹಾ ಶಿವರಾತ್ರಿ ಭಕ್ತಿ ಗೀತೆಗಳು: ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಮಹಾ ಶಿವರಾತ್ರಿ ಹಬ್ಬದ ಸಮಯದಲ್ಲಿ ಶಿವನ ಆರಾಧನೆ, ಭಕ್ತಿ ಹೆಚ್ಚಿಸಲು ಸುಂದರವಾದ ಕನ್ನಡ ಹಾಡುಗಳು, ಭಜನೆಗಳು, ಚಿತ್ರಗೀತೆಗಳು, ಭಕ್ತಿಗೀತೆಗಳನ್ನು ನೀವು ಹುಡುಕುತ್ತ ಇರಬಹುದು. ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ಶಿವನ ಕುರಿತಾದ ಹಾಡುಗಳಿವೆ. ಶಿವರಾತರಿ ಸಮಯದಲ್ಲಿ ಶಿವ ಸ್ತ್ರೋತ್ರ, ಶಿವ ಅಷ್ಟೋತ್ತರ, ಶಿವ ಮಂತ್ರಗಳು, ಶಿವ ತಾಂಡವ ಸ್ತ್ರೋತ್ರ, ಶಿವ ಶ್ಲೋಕಗಳ ಜತೆಗೆ ಕೆಲವು ಹಳೆಯ ಕನ್ನಡ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದಿರುವ ಶಿವನ ಚಿತ್ರಗೀತೆಗಳನ್ನೂ ಹಾಡಬಹುದು. ಶಿವರಾತ್ರಿ ಜಾಗರಣೆ ಸಮಯದಲ್ಲಿ ಈ ಹಾಡುಗಳನ್ನು ಕೇಳುತ್ತ ಇರಬಹುದು. ಶಿವ ಶಿವ ಎನ್ನದ ನಾಲಿಗೆ ಏಕೆ... ಶಿವ ಶಿವ ಎಂದರೆ ಭಯವಿಲ್ಲಾ ಎಂಬೆರಡು ಹಳೆಯ ಚಿತ್ರಗೀತೆಗಳ ಲಿರಿಕ್ಸ್‌ ಮತ್ತು ಹಾಡಿನ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ.

ಜನಪ್ರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಾಮಾಜಿಕ ಚಲನಚಿತ್ರವಿದು. ಜಾತಿ ಕಟ್ಟು ...