ಭಾರತ, ಮಾರ್ಚ್ 2 -- Shiva Rajkumar: ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಕೆಲ ದಿನಗಳ ಹಿಂದಷ್ಟೇ ಅಮೆರಿಕಾದಲ್ಲಿ ಯಶಸ್ವಿ ಕ್ಯಾನ್ಸರ್‌ ಚಿಕಿತ್ಸೆ ಮುಗಿಸಿಕೊಂಡು ತಾಯ್ನಾಡಿಗೆ ಮರಳಿದ್ದಾರೆ. ಹಾಗೆ ಆಗಮಿಸಿದ ಅವರು, ಕೆಲ ದಿನಗಳ ಕಾಲ ರೆಸ್ಟ್‌ನಲ್ಲಿದ್ದರು. ಅಮೆರಿಕಾದಲ್ಲಿದ್ದುಕೊಂಡೇ, ಮಾರ್ಚ್‌ ವೇಳೆಗೆ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದರು. ಇದೀಗ ಅದರಂತೆ, 131ನೇ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸುವುದಕ್ಕೆ ಸಿದ್ಧರಾಗಿದ್ದಾರೆ ನಟ ಶಿವಣ್ಣ.

ಕ್ಯಾನ್ಸರ್ ಮುಕ್ತರಾಗಿರುವ ನಟ ಶಿವರಾಜ್ ಕುಮಾರ್ ರೆಸ್ಟ್ ಮೂಡ್‌ನಿಂದ ಈಗ ವರ್ಕ್ ಮೂಡ್‌ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದ ಶಿವಣ್ಣ ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ವಿಶ್ರಾಂತಿಗೆ ವಿರಾಮ ಹಾಕಿ ಈಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಸೋಮವಾರದಿಂದ (ಮಾ. 3) ಶಿವಣ್ಣ ನಟಿಸುತ್ತಿರುವ 131 ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭವಾಗುತ್ತಿದೆ.

ಈಗಾಗಲೇ 131 ಸ...