Bengaluru, ಫೆಬ್ರವರಿ 27 -- ಶಿವರಾತ್ರಿ ಪ್ರಯುಕ್ತ ಚಂದನವನದ ನಟ, ನಿರ್ದೇಶಕ ತರುಣ್‌ ಸುಧೀರ್‌ ಪತ್ನಿ ಸಮೇತ ಧರ್ಮಸ್ಥಳದ ಶ್ರೀಮಂಜುನಾಥನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಹಿರಿಯ ನಟಿ ಶ್ರುತಿ ಕೃಷ್ಣ ಮತ್ತವರ ಮಗಳು ಗೌರಿ ಸಹ ಶ್ರೀಕ್ಷೇತ್ರದಲ್ಲಿ ಶಿವರಾತ್ರಿಯನ್ನು ಬರಮಾಡಿಕೊಂಡಿದ್ದಾರೆ.

ಕಳೆದ ವರ್ಷವಷ್ಟೇ ಅದ್ಧೂರಿಯಾಗಿ ವಿವಾಹವಾದ ನಿರ್ದೇಶಕ ತರುಣ್‌ ಸುಧೀರ್‌, ಇದೀಗ ಪತ್ನಿ ಜತೆಗೆ ಮೊದಲ ಶಿವರಾತ್ರಿಯನ್ನು ಧರ್ಮಸ್ಥಳದಲ್ಲಿ ಆಚರಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ತಮ್ಮ ಆಪ್ತ ಬಳಗದ ಜತೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ.

ಹಿರಿಯ ನಟಿ ಶ್ರುತಿ ಕೃಷ್ಣ, ಮಗಳು ಗೌರಿ, ತರುಣ್‌ ಸುಧೀರ್‌ ಪತ್ನಿ ಸೋನಲ್‌ ಮೊಂತೆರೋ ಸೇರಿ ಇನ್ನೂ ಹಲವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಅವರ ಆಶೀರ್ವಾದ ಪಡೆದಿದ್ದಾರೆ.

2024ರ ಆಗಸ್ಟ್‌ನಲ್ಲಿ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ ಜೋಡಿಯ ವಿವಾಹ ನಡೆದಿತ್ತು. ಇದೀಗ ಇದೇ ಜೋಡಿ...