ಭಾರತ, ಫೆಬ್ರವರಿ 24 -- ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಪಾದಯಾತ್ರಿಗಳಿಗಾಗಿ ಚಾರ್ಮಾಡಿಯಿಂದ ಸರ್ವಸಿದ್ಧತೆಗಳು ಪೂರ್ಣಗೊಂಡಿವೆ. ಮುಂಡಾಜೆ ತಲುಪುತ್ತಿದ್ದಂತೆ ತಂಡಗಳು ಮೃತ್ಯುಂಜಯ ನದಿಯಲ್ಲಿ ಮಿಂದು ಮುಂದುವರೆಯುತ್ತಿವೆ. ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಸೇರಿದಂತೆ ಅಲ್ಲಲ್ಲಿ ಪಾದಯಾತ್ರೆ ತಂಡಗಳಿಗೆ ಅಡುಗೆ ತಯಾರಿ, ವಿಶ್ರಾಂತಿ ಪಡೆಯಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾದಯಾತ್ರಿಗಳಿಗೆ ಬೆಲ್ಲ, ನೀರು, ಪಾನಕ,ಶರಬತ್ತು, ಕಲ್ಲಂಗಡಿ ಇತ್ಯಾದಿ ಸೇವೆಗಳನ್ನು ಸ್ಥಳೀಯರು ಮಾಡಿದ್ದು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಚಾರ್ಮಾಡಿ ಘಾಟಿಯ ಅಲ್ಲಲ್ಲಿ ಕುಡಿಯುವ ನೀರು, ಬೆಲ್ಲ ವಿತರಣೆ ಮಾಡಲಾಗುತ್ತಿದೆ. ಪಾದಯಾತ್ರಿಗಳು ಸಾಗಿ ಬರುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ಬುಟ್ಟಿ, ಗೋಣಿಚೀಲಗಳನ್ನು ಇರಿಸಿ ಕಸ ಹಾಕಲು ವ್ಯವಸ್ಥೆ ಮಾಡಲಾಗಿದೆ. ಚಾರ್ಮಾಡಿ ಘಾಟಿ ಸೇರಿದ...