ಭಾರತ, ಮೇ 4 -- ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಇಳಾ ವಿಟ್ಲ ಇತ್ತೀಚೆಗೆ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕುಡ್ಲದಕ್ಲು(ಅರ್ಥ: ಮಂಗಳೂರಿನವರು) ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಮಯದಲ್ಲಿ ಕೊರಗಜ್ಜನ ಮಹಿಮೆಯ ಕುರಿತೂ ನಟಿ ಮಾತನಾಡಿದ್ದಾರೆ. ವಿಟ್ಲದವರಾದರೂ ಇಳಾ ಅವರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಂತೆ. "ನಾನು ಊರಿಗೆ ಸಾಕಷ್ಟು ಬಾರಿ ಬಂದಾಗಲೂ ಇಲ್ಲಿಗೆ ಬರಲು ಆಗಲಿಲ್ಲ. ಇಂದು ಯೋಗ ಬಂತು, ಅಜ್ಜ ಕರೆದರು. ಬಂದೆ. ಮಂಗಳೂರಿನಲ್ಲಿ ಒಂದಿಷ್ಟು ಕೆಲಸಗಳಿದ್ದವು. ಈ ಬಾರಿ ಕೊರಗಜ್ಜನ ಬಳಿಗೆ ಬರಲೇಬೇಕೆಂದು ಒಂದು ವಾರದಿಂದ ಅಂದುಕೊಂಡಿದ್ದೆ. ಈಗ ಇಲ್ಲಿಗೆ ಬರುವ ಅವಕಾಶ ದೊರಕಿತು" ಎಂದು ಇಳಾ ಹೇಳಿದ್ದಾರೆ.

"ನಾನು ಹುಟ್ಟಿದ್ದು ಅಡ್ಯಾರಿನಲ್ಲಿ. ದೊಡ್ಡಪ್ಪನ ಮನೆಯಲ್ಲಿ ಭೂತಕೋಲ ಇರುತ್ತಿತ್ತು. ಹೀಗಾಗಿ ದೈವಗಳ ಬಗ್ಗೆ ನನಗೆ ಬಾಲ್ಯದಿಂದಲೇ ಗೊತ್ತು. ಕೊರಗಜ್ಜನ ಬಗ್ಗೆ ನನಗೆ ಸಾಕಷ್ಟು ಅನುಭವವಾಗಿತ...