ಭಾರತ, ಮಾರ್ಚ್ 31 -- 45 Movie Teaser: ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಜೊತೆಯಾಗಿ ಅಭಿನಯಿಸಿರುವ '45' ಚಿತ್ರದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಆಗಿದೆ. ಚಿತ್ರದ ಪೋಸ್ಟರ್‌ಗಳಲ್ಲಿ ಶಿವರಾಜಕುಮಾರ್ ಅವರಿಗೆ 'ಕರುನಾಡ ಚಕ್ರವರ್ತಿ', ಉಪೇಂದ್ರ ಅವರಿಗೆ 'ರಿಯಲ್‍ ಸ್ಟಾರ್' ಎಂಬ ಬಿರುದುಗಳನ್ನು ಬರೆಯಲಾಗಿತ್ತು. ಆದರೆ, ರಾಜ್‍ ಬಿ. ಶೆಟ್ಟಿಗೆ ಮಾತ್ರ ಯಾವುದು ಬಿರುದು ಇರಲಿಲ್ಲ. ಇಷ್ಟಕ್ಕೂ ರಾಜ್‌ಗೆ ಯಾಕೆ ಯಾವ ಬಿರುದೂ ಇಲ್ಲ?

ಈ ಪ್ರಶ್ನೆಗೆ ಉತ್ತರಿಸಿದ ಅರ್ಜುನ್ ಜನ್ಯ, 'ನಾವು ಟೀಸರ್ ಮಾಡಿದಾಗ ರಾಜ್‍ ಅವರಿಗೂ ಒಂದು ಬಿರುದು ಕೊಟ್ಟಿದ್ವಿ. ಆದರೆ, ರಾಜ್‍ ಅದಕ್ಕೆ ಒಪ್ಪಲಿಲ್ಲ. ತಾವು ಬರೀ ನಟನಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಹಾಗಾಗಿ, ಬಿರುದು ತೆಗೆದುಹಾಕಬೇಕಾಯಿತು' ಎಂದರು. ಆದರೆ, ರಾಜ್‍ ಬಿ. ಶೆಟ್ಟಿ ಈ ಚಿತ್ರದಲ್ಲಿ ಆತ್ಮವನ್ನು ಪ್ರತಿನಿಧಿಸುವುದರಿಂದ, ಶಿವರಾಜಕುಮಾರ್ ಈ ಸಂದರ್ಭದಲ್ಲಿ Soul Star ಎಂಬ ಬಿರುದನ್ನು ನೀಡಿದರು.

ಇದನ್ನೂ ಓದಿ: ʻ45ʼ ಚಿತ್ರದ ವಿಚಿತ್ರ ಟೀಸರ್‌ಗೆ...