ಭಾರತ, ಏಪ್ರಿಲ್ 2 -- ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಪ್ರಯುಕ್ತ ಭಕ್ತರೊಬ್ಬರು ರಂಗೋಲಿಯಲ್ಲಿ ಶ್ರೀಗಳ ಭಾವಚಿತ್ರ ಅರಳಿಸುವ ಮೂಲಕ ಭಕ್ತಿ ಮೆರೆದರು. ಶ್ರೀಮಠದ ಆವರಣದಲ್ಲಿ 125 ಅಡಿ ಉದ್ದದ, 65 ಅಗಲ ಸೇರಿ 8125 ಚದರ ಅಡಿ ವಿಸ್ತೀರ್ಣದ ರಂಗೋಲಿಯಲ್ಲಿ ಬಿಡಿಸಲಾಗಿರುವ ಶಿವಕುಮಾರ ಶ್ರೀಗಳ ಭಾವಚಿತ್ರ ನೋಡುಗರ ಕಣ್ಮನ ಸೆಳೆಯಿತು. ಮೈಸೂರಿನ ಕಲಾವಿದ ಪುನೀತ್, ಲಕ್ಷ್ಮಿ, ಆದಿತ್ಯ, ಸಂಪ್ರೀತ್, ಸಂಜಯ್ ಎಂಬ ಐವರು ಕಲಾವಿದರ ಕಲಾ ಕುಂಚದಿಂದ ಅರಳಿದ್ದು, ಇವರು ಬಿಡಿಸಲಾಗಿರುವ ಶ್ರೀಗಳ ಭಾವಚಿತ್ರದ ಚಿತ್ತಾಕರ್ಷಕ ಬೃಹತ್ ಗಾತ್ರದ ರಂಗೋಲಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವ ಸಹಸ್ರಾರು ಭಕ್ತಾದಿಗಳ ಗಮನ ಸೆಳೆದಿದೆ.

ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತರು, ಗಣ್ಯರ ದಂಡು ಹರಿದು ಬಂದಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಂಸ...