ಭಾರತ, ಮೇ 2 -- ಮಾಜಿ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದ 2 ವರ್ಷಗಳ ನಂತರ, ಶಿಖರ್ ಧವನ್ ಐರ್ಲೆಂಡ್‌ನ ಸೋಫಿ ಶೈನ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ದೃಢಪಡಿಸಿದ್ದಾರೆ. ಮಾರ್ಚ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಧವನ್ ಮತ್ತೊಬ್ಬರ ಜೊತೆ ಡೇಟಿಂಗ್ ನಡೆಸುತ್ತಿರುವ ಕುರಿತು ಸುಳಿವು ನೀಡಿದ್ದರೂ, ಆ ವೇಳೆ ಅವರು ಶೈನ್ ಹೆಸರನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು.

ಆದರೀಗ ಭಾರತದ ಮಾಜಿ ಆರಂಭಿಕ ಆಟಗಾರ ಧವನ್ ಅವರು ತನ್ನ ಗೆಳತಿ ಸೋಫಿ ಶೈನ್ ಅವರೊಂದಿಗಿನ ರಿಲೇಷಿಪ್ (ಸಂಬಂಧವನ್ನು)​ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕೊನೆಗೂ ಸಂಬಂಧ ಅಧಿಕೃತಗೊಳಿಸಿದೆ. ಈ ಬಗ್ಗೆ ದಂಪತಿ ಇನ್​ಸ್ಟಾಗ್ರಾಂನಲ್ಲಿ ಮೈ ಲವ್ (ನನ್ನ ಪ್ರೇಯಸಿ) ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಮಾರ್ಚ್​​ನಲ್ಲಿ ನಡೆದಿದ್ದ ಅದೇ ಕಾರ್ಯಕ್ರಮದಲ್ಲಿ ಕೇಳಿದ್ದ ಡೇಟಿಂಗ್ ಕುರಿತು ಪ್ರಶ್ನೆ ತಳ್ಳಿ ಹಾಕಿದ್ದ ಧವನ್, 'ನಾನು ಯಾವುದೇ ಹೆಸರನ...