ಭಾರತ, ಏಪ್ರಿಲ್ 2 -- ಯುಗಾದಿ ಹಬ್ಬವನ್ನು ಇತ್ತೀಚೆಗೆ ಆಚರಿಸಿದ್ದೇವೆ. ಹೊಸ ವರ್ಷವನ್ನು ಯುಗಾದಿಯಿಂದ ಆರಂಭಿಸುವ ನಾವು ಈ ದಿನ ಮಿಕ್ಕೆಲ್ಲ ಆಚರಣೆಗಳ ಜೊತೆಗೆ ಪಂಚಾಂಗ ಶ್ರವಣ ಹಬ್ಬದ ಮುಖ್ಯ ಭಾಗವಾಗಿ ಹಮ್ಮಿಕೊಳ್ಳುತ್ತೇವೆ. ಸೂರ್ಯ ಮತ್ತು ಆತನ ಸುತ್ತ ತಿರುಗುವ ಭೂಮಿ ಹಾಗೂ ಇನ್ನಿತರ ಆಕಾಶಕಾಯಗಳ ಚಲನೆಯನ್ನು ಕರಾರುವಕ್ಕಾಗಿ ದಾಖಲಿಸುವ ಪಂಚಾಂಗವನ್ನು ಪೂಜಿಸಿ ನಂತರ ಓದುವ ಪರಿಪಾಠ ಎಲ್ಲರ ಮನೆಯಲ್ಲಿ ನಡೆದಂತೆ ಗೆಳತಿಯೊಬ್ಬಳ ಮನೆಯಲ್ಲೂ ನಡೆದಿತ್ತು. ಪಂಚಾಂಗ ಕೇಳುತ್ತ ಅಲ್ಲಿಯೇ ಕುಳಿತಿದ್ದ ಗೆಳತಿಯ ಮೊಮ್ಮಗ 'ಸುನೀತಾ ವಿಲಿಯಮ್ಸ ಭಾರತೀಯ ಮೂಲದವರು ಅವರು ಕೂಡ ಪಂಚಾಂಗ ಶ್ರವಣ ಮಾಡ್ತಾರಾ?' ಎoದು ಕೇಳಿದನಂತೆ. ಗೆಳತಿಗೆ ಗೊ೦ದಲ. ಯಾಕೆಂದು ಕೇಳಿದ ಅಜ್ಜಿಗೆ 'ಪಂಚಾಂಗದಲ್ಲೂ ಸೂರ್ಯ, ಚಂದ್ರ, ಭೂಮಿ, ನಕ್ಷತ್ರಗಳ ಬಗ್ಗೆ ಓದ್ತಾ ಇದ್ದಾರೆ, ಸುನೀತಾ ವಿಲಿಯಮ್ಸ ಅಂತರಿಕ್ಷದಲ್ಲಿ ಮಾಡಿದ್ದು ಇದೇ ಕೆಲಸ ಅಲ್ವಾ' ಎಂದನಂತೆ. ಮತ್ತೆ 'ಅಜ್ಜೀ, ಸುನೀತಾ ವಿಲಿಯಮ್ಸಗೆ ನಿಂಗೆ ಒಂದೇ ವಯಸ್ಸು, ನೀನೂ ಸ್ಪೇಸ್‌ಗೆ ಹೋಗಬಹುದು ನೋಡು' ಎಂದನಂತೆ. ಅವ...