ಭಾರತ, ಏಪ್ರಿಲ್ 29 -- ನಾನು ಮತ್ತು ಗುಂಡ 2: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅಂಥಾ ಗುಂಡ(ನಾಯಿ) ಮತ್ತು ಹುಡುಗನೊಬ್ಬನ ನಡುವಿನ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೇಮದ ಕಥೆಯನ್ನು ಹೇಳುವ ಚಿತ್ರ 'ನಾನು ಮತ್ತು ಗುಂಡ 2' ಪೊಯೆಮ್ ಪಿಕ್ಚರ್ಸ್ ಅಡಿಯಲ್ಲಿ ರಘುಹಾಸನ್ ಕಥೆ ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶನ ಮಾಡಿರುವ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಜೋಗಿ ಪ್ರೇಮ್ ಅವರು ಈ ಮೆಲೋಡಿ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಹಾಡಿನ ಸ್ವರ ಸಂಯೋಜಕ ಆರ್.ಪಿ.ಪಟ್ನಾಯ್ ಕೂಡ ಹಾಜರಿದ್ದರು. ಪ್ರಜಾಕಿರಣ ಸೇವಾ ಕಿರಣ ಟ್ರಸ್ಟ್ ನ ನೂರಾರು ಮಕ್ಕಳು ಅತಿಥಿಗಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಈ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ನಾನು ಮತ್ತು ಗುಂಡ ಚಿತ್ರದ ಮುಂದುವರೆದ ಭಾಗವಾದ "ನಾನು ಮತ್ತು ಗುಂಡ -2" ತೆರೆಗೆ ಬರಲು ಸಿದ್ದವಾಗಿದ್ದು ಇತ್ತೀಚೆಗಷ್ಟೇ ಈ ಚಿತ್ರದ ಟೀಸರನ್ನು ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ಕಿರಗಂದೂರು ರಿಲ...