ಭಾರತ, ಏಪ್ರಿಲ್ 27 -- ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಟೂರ್ನಿಯಲ್ಲೂ ಪಾಕಿಸ್ತಾನದ ಗೆಲುವಿನಲ್ಲಿ ಅವರ ನಿರ್ಣಾಯಕ ಪಾತ್ರವು ದೇಶಕ್ಕೆ ಹೆಮ್ಮೆ ತಂದಿದೆ. 2017ರಲ್ಲಿ ತಮ್ಮ 21 ವರ್ಷಗಳ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ಅಫ್ರಿದಿಯನ್ನು ಅವರ ಅಭಿಮಾನಿಗಳು 'ಬೂಮ್ ಬೂಮ್' ಮತ್ತು 'ಲಾಲಾ' ಎಂದು ಪ್ರೀತಿಯಿಂದ ಕರೆಯುತ್ತಾರೆ. ಈ ವಿಶ್ವಶ್ರೇಷ್ಠ ಆಟಗಾರನ ಪ್ರೀತಿ ವಿಚಾರ ಸಾಕಷ್ಟು ಮಂದಿಗೆ ಗೊತ್ತಿಲ್ಲ. ಪಾಕಿಸ್ತಾನಿ ಕ್ರಿಕೆಟಿಗ ವಿವಾಹವಾಗಿದ್ದು ತನ್ನ 16 ವರ್ಷದ ಸೋದರಸಂಬಂಧಿಯನ್ನ!

ಶಾಹಿದ್ ಅಫ್ರಿದಿ ಅವರ ಪ್ರೇಮ ಜೀವನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಯಾರೂ ಆತನ ಪತ್ನಿಯ ಮುಖವನ್ನು ನೋಡಿಲ್ಲ. ಹಾಗಾಗಿ, ಶಾಹಿದ್ ಅಫ್ರಿದಿ ಪತ್ನಿ ನಾದಿಯಾ ಅವರೊಂದಿಗಿನ ಪ್ರೇಮಕಥೆ ಮತ್ತು 2 ದಶಕಗಳಿಗೂ ಹೆಚ್ಚು ಕಾಲ ಈ ಜೋಡಿಯ ಪ್ರೀತಿ ಹೇಗೆ ಗಟ್ಟಿಯಾಗಿದೆ ಎಂಬುದರ ಕುರಿತು ಲಭ್ಯವಿರುವ ಎಲ್ಲಾ ಮಾ...