ಭಾರತ, ಮೇ 29 -- ಮಕ್ಕಳೆಲ್ಲಾ ಬೇಸಿಗೆ ರಜೆ ಮುಗಿಸಿ, ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಇಂದು (ಮೇ 29) ಬಹುತೇಕ ಕಡೆ ಶಾಲೆ, ಕಾಲೇಜುಗಳು ಆರಂಭವಾಗುತ್ತಿವೆ. ಆದರೆ ಶಾಲೆ ಆರಂಭದ ಜೊತೆ ಮಳೆರಾಯನ ಅಬ್ಬರವೂ ಜೋರಾಗಿದೆ. ರಾಜ್ಯದಾದ್ಯಂತ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಆ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸವಾಲು.

ಜೋರಾಗಿ ಬೀಸುವ ಗಾಳಿ, ರಭಸದಿಂದ ಸುರಿಯುತ್ತಿರುವ ಮಳೆ, ತುಂಬಿ ಹರಿಯುವ ಹಳ್ಳ-ಕೊಳ್ಳಗಳು, ಗುಡುಗು ಸಿಡಿಲು ಈ ನಡುವೆ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು. ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗೆ ಪೋಷಕರು ಏನೆಲ್ಲಾ ಗಮನ ಹರಿಸಬೇಕು ಎನ್ನುವ ವಿವರ ಇಲ್ಲಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಕ್ಕಳು ಶಾಲೆಗೆ ಹೋಗುವಾಗ ಹಳ್ಳ, ನದಿ, ತೊರೆಗಳನ್ನು ದಾಟಿ ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಅಪಾಯಗಳು ಎದುರಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಕ್ಕಳನ್ನು ಒಬ್ಬೊಬ್ಬರೇ ಬಿಡಬೇಡಿ. ನೀವು ಅವರ ಜೊತೆ ಹೋಗಿ ಶಾಲೆವರೆಗೆ ಬಿಟ್ಟು ಬಂದರೆ ಉತ್ತಮ. ಜೋರಾಗಿ ಹರಿಯುವ ನೀರ...