ಭಾರತ, ಏಪ್ರಿಲ್ 8 -- Pawan Kalyan Son: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಟಾಲಿವುಡ್‌ ನಟ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಘಟಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾರೆ. 8 ವರ್ಷದ ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ದುರಂತದಲ್ಲಿ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ ಎಂದು ಜನಸೇನಾ ಮೂಲಗಳು ತಿಳಿಸಿವೆ. ದುರಂತದಲ್ಲಿ ಮಾರ್ಕ್ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪವನ್ ಕಲ್ಯಾಣ್ ಅಲ್ಲುರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ ಸಿಂಗಾಪುರದತ್ತ ಹೊರಟಿದ್ದಾರೆ.

ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದಷ್ಟೇ ಅಲ್ಲದೆ, ಮಾರ್ಕ್‌ ಅವರ ಶ್ವಾಸಕೋಶಕ್ಕೂ ಹೊಗೆ ಪ್ರವೇಶಿಸಿದ್ದರಿಂದ ಉಸಿರಾಟದ ತೊಂದರೆ ಅನುಭವಿಸಿದರು. ಕೂಡಲೇ ಶಾಲಾ ಸಿಬ್ಬಂದಿ ಮಾರ್ಕ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದೆ. ಮಾರ್ಕ್‌ ಜತೆಗೆ ಇನ್ನೂ 14 ಮಕ್ಕಳು, ನಾಲ್ವರು ಶಿಕ...