ಭಾರತ, ಮಾರ್ಚ್ 22 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು (ಮಾರ್ಚ್ 22) ವರ್ಣರಂಜಿತ ಚಾಲನೆ ಪಡೆದುಕೊಂಡಿತು. ಗಾಯಕಿ ಶ್ರೇಯಾ ಘೋಷಾಲ್, ನಟಿ ದಿಶಾ ಪಟಾನಿ, ಕರಣ್ ಅಲುಜಾ ತಮ್ಮ ಪ್ರದರ್ಶನದೊಂದಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರಂಜಿಸಿದರು. ಆದಾಗ್ಯೂ, ಶಾರುಕ್ ಖಾನ್ ಅವರೊಂದಿಗೆ ವಿರಾಟ್ ಕೊಹ್ಲಿ ಮತ್ತು ರಿಂಕು ಸಿಂಗ್ ಹಾಕಿದ ಸ್ಟೆಪ್ಸ್​ ಹಾಕಿದ್ದು ಎಲ್ಲರನ್ನೂ ಮನಸೂರೆಗೊಳಿಸಿತು.

ಬಾಲಿವುಡ್ ದಂತಕಥೆ ಮತ್ತು ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಅವರು ಉದ್ಘಾಟನಾ ಸಮಾರಂಭದ ನಿರೂಪಣೆ ಹೊತ್ತಿದ್ದರು. ಈ ವೇಳೆ ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆಕೆಆರ್​ ಫಿನಿಷರ್ ರಿಂಕು ಸಿಂಗ್ ಅವರನ್ನು ವೇದಿಕೆಗೆ ಸ್ವಾಗತಿಸಿದರು. ಕೊಹ್ಲಿ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೊಂಡಾಡಿದ ಬಾಲಿವುಡ್ ಬಾದ್​ಶಾ, 18 ವರ್ಷ ಒಂದೇ ತಂಡದ ಪರ ಆಡುತ್ತಿರುವುದನ್ನು ಶ್ಲಾಘಿಸಿದರು.

ಶಾರುಖ್ ವೇದಿಕೆಗೆ ಕೊಹ್ಲಿಯನ್ನು ಆಹ್ವಾನಿಸಿದಾಗ ರೋಮಾಂಚಕಾರಿ ಕ್ಷಣ ಸ...