Kochi, ಮಾರ್ಚ್ 11 -- ಪತ್ತನಂತಿಟ್ಟ: ಕೇರಳದ ಪ್ರತಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದರ್ಶನದ ಮಾರ್ಗವನ್ನು ಬದಲಾಯಿಸಲು ತಿರುವಾಂಕೂರು ದೇವಸ್ವಂ ಮಂಡಳಿ (TDB) ನಿರ್ಧರಿಸಿದೆ. ಭಕ್ತರು ಅಯ್ಯಪ್ಪ ಸನ್ನಿಧಾನದ ಪವಿತ್ರ 18 ಮೆಟ್ಟಿಲುಗಳನ್ನು ಹತ್ತುವ ಮೂಲಕ ನೇರವಾಗಿ ದರ್ಶನ ಪಡೆಯಲು ಇನ್ಮುಂದೆ ಅವಕಾಶ ನೀಡಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಜಾರಿಗೆ ಬರಲಿದೆ.

ಶಬರಿಮಲೆ ಭಕ್ತರ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ, ತಿರುವಾಂಕೂರು ದೇವಸ್ವಂ ಮಂಡಳಿಯು 'ದರ್ಶನ' ಮಾರ್ಗವನ್ನು ಬದಲಾಯಿಸಲು ನಿರ್ಧರಿಸಿದೆ. ಈ ಬದಲಾವಣೆಯನ್ನು ಮಾರ್ಚ್ 15ರಿಂದ ಮಾಸಿಕ ಪೂಜೆಯ ಸಮಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ವಿಷು ಪೂಜೆಯ ಸಮಯದಲ್ಲಿ 12 ದಿನಗಳವರೆಗೆ ಮುಂದುವರಿಯುತ್ತದೆ ಎಂದು ಟಿಡಿಬಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಘೋಷಿಸಿದ್ದಾರೆ.

"ಇದು ಯಶಸ್ವಿಯಾದರೆ, ಮುಂದಿನ ಮಂಡಲ - ಮಕರವಿಳಕ್ಕು ಋತುವಿನಲ್ಲಿ ಈ ಬದಲಾವಣೆಯನ್ನು ಶಾಶ್ವತಗೊಳಿಸಲಾಗುವುದು" ಎಂದು ಪ್ರಶಾಂತ್ ಹೇಳಿದ್ದಾರೆ. ...