Bengaluru, ಏಪ್ರಿಲ್ 10 -- Lal Kitab Remedies: ಜೋತಿಷ್ಯದಲ್ಲಿ ಲಾಲ್ ಕಿತಾಬ್ ಸಹ ಒಂದು. ಪ್ರತಿಯೊಂದು ರೋಗಕ್ಕೂ ಔಷಧಿ ಇರುವಂತೆ ಜೀವನದಲ್ಲಿ ಎದುರಾಗುವ ಕಷ್ಟ ನಷ್ಟಗಳಿಗೆ ಸಹ ಪರಿಪಕ್ವ ಪರಿಹಾರಗಳಿವೆ. ವೇದ ಜೋತಿಷ್ಯ, ಸಂಖ್ಯಾ ಜೋತಿಷ್ಯ, ಪ್ರಶ್ನ ಜೋತಿಷ್ಯ, ಕವಡೆ ಜೋತಿಷ್ಯ ಇನ್ನು ಮುಂತಾದವುಗಳು. ಇದೇ ರೀತಿ ನಮಗೆ ದೊರೆತ ವಿದೇಶಿ ಜ್ಞಾನ ಭಂಡಾರವೆ ಲಾಲ್ ಕಿತಾಬ್. ಕೆಲವರ ಅನಿಸಿಕೆಯಂತೆ ಇದು ಪರ್ಷಿಯ ದೇಶದ ಕೊಡುಗೆ. ಆದರೆ ಇದು ನಮಗೆ ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ದೊರೆಯುತ್ತವೆ. ಕೆಲವರ ಅಭಿಪ್ರಾಯದಂತೆ ಇದನ್ನು ರಚಿಸಿರುವವನು ಶ್ರೀರಾಮನಿಗೆ ಯುದ್ದದ ಮುಹೂರ್ತವನ್ನು ನೀಡಿದ ರಾವಣ ಎಂದು ತಿಳಿದುಬರುತ್ತದೆ. ಇದರಲ್ಲಿ ಲಿಂಗಬೇಧವಿಲ್ಲದೆ, ಜಾತಿಬೇಧವಿಲ್ಲದೆ, ಧರ್ಮ ಬೇಧವಿಲ್ಲದೆ ಮಾಡಬಹುದಾದ ಸುಲಭವಾದ ಪರಿಹಾರಗಳು ನಮಗೆ ದೊರೆಯುತ್ತವೆ. ಇದರಲ್ಲಿ ಹಸ್ತದಲ್ಲಿರುವ ರೇಖೆಗಳನ್ನು ಪರಿಶೀಲಿಸಿ ಜಾತಕ ರಚಿಸುವ ವಿಧಾನವನ್ನು ವಿವರಿಸಿದ್ದಾರೆ. ಜನ್ಮರಾಶಿಯ ಅನುಸಾರವಾಗಿ ಶನಿಗೆ ಸಂಬಂಧಿಸಿದ ಕೆಲವು ಸುಲಭ ಪರಿಹಾರಗಳನ್ನು ಇಲ್ಲಿ...