Bengaluru, ಮೇ 25 -- ಗ್ರಹಗಳಲ್ಲಿ ಹೆಚ್ಚಿನವರು ಕುಜ, ಶನಿಗೆ ಬಹಳ ಹೆದರುತ್ತಾರೆ. ಕುಜ ದೋಷ ಇದ್ದರೆ ಮದುವೆ ತಡವಾಗುತ್ತದೆ. ಶನಿ ಕೃಪೆ ಇಲ್ಲದಿದ್ದಲ್ಲಿ ಜೀವನದಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಅದರಲ್ಲು ಶನಿ ಸಾಡೇಸಾತಿ ಇದ್ದರಂತೂ ಬಹಳ ಕಷ್ಟ. ಆದ್ದರಿಂದ ಜನರು ಕಷ್ಟಗಳಿಂದ ಪಾರಾಗಲು, ಶನಿದೇವನ ಆಶೀರ್ವಾದ ಪಡೆಯಲು ಪ್ರತಿ ಶನಿವಾರ ಶನೈಶ್ವರ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ಬರುತ್ತಾರೆ. ಹನುಮಾನ್‌ ಚಾಲೀಸಾ ಓದುತ್ತಾರೆ.

ಜೂನ್ ತಿಂಗಳಿನಲ್ಲಿ ಶನಿ ದೇವರಿಗೆ ಸಂಬಂಧಿಸಿದ 2 ದಿನಗಳು ಬಹಳ ವಿಶೇಷವಾಗಿದೆ. ಈ ಎರಡೂ ದಿನಗಳು ನೀವು ಶನಿಯನ್ನು ಪೂಜಿಸುವುದರಿಂದ ಆತನ ಅನುಗ್ರಹ ಪಡೆಯಬಹುದು. ಶನಿ ಪ್ರಭಾವದಿಂದ ಪಾರಾಗಬಹುದು. ಆ ಎರಡು ದಿನಗಳು ಯಾವುದು? ಯಾವ ರೀತಿ ಶನಿಯನ್ನು ಆರಾಧಿಸಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

ಜೂನ್‌ ತಿಂಗಳಲ್ಲಿ ಶನಿ ಜಯಂತಿ ಇದ್ದು ಈ ದಿನ ಬಹಳ ವಿಶೇಷವಾದುದು, ಈ ದಿನ ನೀವು ಶನಿದೇವನನ್ನು ನಿಯಮಾನುಸಾರ ಪೂಜಿಸಿದರೆ ನೀವು ಶನಿಯಿಂದ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಂದ ಹೊರ ಬರಬಹುದು. ಈ ಬಾರ...