Bengaluru, ಮೇ 15 -- ಶನಿ ಜಯಂತಿ 2024: ಈ ವರ್ಷ ಜೂನ್ ತಿಂಗಳಲ್ಲಿ ಶನಿಯಿಂದ ಕಷ್ಟಕ್ಕೆ ಒಳಗಾದ ರಾಶಿಚಕ್ರದ ಜನರು ಶನಿ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ಮಂಗಳಕರ ಸಮಯವಾಗಿದೆ. ಶನಿಯು ಪಾಪ ಪುಣ್ಯಗಳಿಗೆ ತಕ್ಕಂತೆ ಶಿಕ್ಷೆ ನೀಡುತ್ತಾನೆ, ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದಲೇ ಶನಿದೇವನನ್ನು ಕಂಡರೆ ಬಹಳಷ್ಟು ಜನರಿಗೆ ಭಯ.

ಈ ಬಾರಿ ಜೂನ್ ತಿಂಗಳಿನಲ್ಲಿ ಶನಿ ಜಯಂತಿ ಆಚರಿಸಲಾಗುತ್ತಿದೆ. ಇಂದು ಶನಿ ದೇವರನ್ನು ಪೂಜಿಸುವುದರಿಂದ ವಿಶೇಷವಾದ ಪುಣ್ಯ ಲಭಿಸುತ್ತದೆ. ಸಾಡೇ ಸಾತಿ ಶನಿ ಮತ್ತು ಅರ್ಥಾಷ್ಟಮ ಶನಿ ಸಮಸ್ಯೆಗಳಿಂದ ಮುಕ್ತಿ ಹೊಂದಲು ಶನಿಯನ್ನು ಪೂಜಿಸುವುದು ಬಹಳ ಮುಖ್ಯ . ಈ ಸಮಯದಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿ ಕಾಲ ಇರುತ್ತದೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದವರಿಗೆ ಶನಿ ಜಯಂತಿಯು ಅದ್ಭುತವಾದ ದಿನವಾಗಿದೆ. ಈ ದಿನ ಅರಳಿ ಮರವನ್ನು ಪೂಜಿಸಬೇಕು . ಹಾಗೆಯೇ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಪ್ರಾರ್ಥಿಸಿದರೆ ಶನಿದ...