ಭಾರತ, ಮೇ 7 -- ಕೆಲಸವಿಲ್ಲದೆ ಅದೆಷ್ಟೋ ಮಂದಿ ಕಂಪನಿಯಿಂದ ಕಂಪನಿಗೆ ಅಲೆದಾಡುತ್ತಿದ್ದಾರೆ. ಕೆಲವರಂತೂ ತಾವು ಓದಿರುವ ವಿದ್ಯೆಗೂ ಮಾಡುತ್ತಿರುವ ಕೆಲಸಕ್ಕೆ ಸಂಬಂಧವೇ ಇಲ್ಲ! ಇಂತಹವರ ಮಧ್ಯೆ ಲಕ್ಷಾಂತರ ಉದ್ಯೋಗಿಗಳು ಒತ್ತಡ ಎಂಬ ಸಮುದ್ರದಲ್ಲಿ ಹರಸಾಹಸಪಟ್ಟು ಈಜಿ ಹೇಗೋ ದಡ ಸೇರುತ್ತಿದ್ದಾರೆ. ಏಕೆಂದರೆ ಅಷ್ಟರಮಟ್ಟಿಗೆ ಒತ್ತಡ ಉದ್ಯೋಗಿಗಳನ್ನು ಕಾಡುತ್ತಿದೆ. ಅದರಲ್ಲೂ ಐಟಿ-ಬಿಟಿ ಕಂಪನಿಗಳಲ್ಲೇ ಇದು ಹೆಚ್ಚು ಕಾಣಸಿಗುತ್ತದೆ. ರಾತ್ರಿ-ಹಗಲು ಕಂಪನಿಗೋಸ್ಕರ ಸೇವೆ ಸಲ್ಲಿಸುತ್ತಾ ತಮ್ಮ ಸರ್ವಸ್ವವನ್ನೂ ಮುಡಿಪಾಗಿಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಶನಿವಾರವೂ ಕೆಲಸ ಮಾಡಬೇಕು ಎಂದು ಹೇಳಿದ್ದಕ್ಕೆ ಜಾಬ್ ಆಫರ್​ ಅನ್ನೇ ತಿರಸ್ಕರಿಸಿದ್ದಾರೆ! ಅಚ್ಚರಿ ವಿಷಯ ಏನೆಂದರೆ ಈ ಮಹಿಳೆ ನಿರ್ಧಾರಕ್ಕೆ ಕಂಪನಿಯ ಹೆಚ್​​​ಆರ್​​ ಶ್ಲಾಘಿಸಿದ್ದಾರೆ.

ಸಾಂದರ್ಭಿಕ ಶನಿವಾರದ ದಿನಗಳಲ್ಲಿ ಕೆಲಸ ಮಾಡಬೇಕಾದ ಕೆಲಸದ ಪ್ರಸ್ತಾಪ ತಿರಸ್ಕರಿಸಿದ ಜನರಲ್ ಝಡ್ ಅಭ್ಯರ್ಥಿಯನ್ನು ಲಿಂಕ್ಡ್ಇನ್​ನಲ್ಲಿ ಶ್ಲಾಘಿಸಿದ ಎಚ್ಆರ್ ಪೋಸ್ಟ್ ಗಮನ ಸೆಳೆಯುತ್ತಿದೆ. ಫಸ್ಟ...