Bengaluru, ಫೆಬ್ರವರಿ 6 -- ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನ್ಯಾಯದ ದೇವರು ಎಂದೂ ಕರೆಯಲಾಗುತ್ತದೆ. ಕರ್ಮ, ಕರ್ತವ್ಯ, ಶಿಸ್ತು ಮತ್ತು ಶಿಕ್ಷೆಯನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಶನಿಯು ನಿಧಾನವಾಗಿ ಅಷ್ಟೇ ಕ್ರಮಬದ್ಧವಾಗಿ ಚಲಿಸುವ ಗ್ರಹವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿತ್ರಿಸಲಾಗಿದೆ. ವ್ಯಕ್ತಿಯು, ಅವನ ಗುರಿಗಳನ್ನು ಸಾಧಿಸಲು ಅಗತ್ಯವಿರುವ ತಾಳ್ಮೆ, ಪರಿಶ್ರಮ ಮತ್ತು ಶ್ರದ್ಧೆಯನ್ನು ಉತ್ತೇಜಿಸುತ್ತದೆ. ಶನಿ ದೇವನು ಕೆಲವು ನಿಯಮಗಳನ್ನು ಹಾಕಿಕೊಟ್ಟಿದ್ದಾನೆ. ಕೆಲವು ಮಾಡಲೇಬೇಕಾದ ಮತ್ತು ಇನ್ನು ಕೆಲವು ಮಾಡಲೇಬಾರದ ಸಂಗತಿಗಳನ್ನು ಹೇಳಲಾಗಿದೆ. ಶಿಸ್ತು ಮತ್ತು ಜವಾಬ್ದಾರಿಯನ್ನು ಅನುಸರಿಸುವವರಿಗೆ ಒಳ್ಳೆಯ ಫಲವನ್ನು ನೀಡುತ್ತಾನೆ. ಅದೇ ಅವುಗಳನ್ನು ನಿರ್ಲಕ್ಷಿಸುವವರಿಗೆ ಕಠಿಣ ಸವಾಲುಗಳನ್ನು ಎದುರಿಸುವಂತಹ ಪರಿಸ್ಥಿತಿಯನ್ನು ತರುತ್ತಾನೆ. ಶನಿಯು ಕಠಿಣ ಶ್ರಮ, ಜವಾಬ್ದಾರಿ ಮತ್ತು ಕರ್ತವ್ಯಗಳ ಪರಿಣಾಮ ಇವುಗಳ ಬಗ್ಗೆ ಅಗತ್ಯವಿರುವ ಪಾಠಗಳ...