Bengaluru, ಮಾರ್ಚ್ 22 -- Actor Darshan: ಸ್ಯಾಂಡಲ್‌ವುಡ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸದ್ಯ ರಿಲೀಫ್‌ ಮೂಡ್‌ನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದು, ಒಂದಷ್ಟು ದಿನ ವಿಶ್ರಾಂತಿ ಪಡೆದು ಮತ್ತೆ ನಟನೆಗೆ ಮರಳಿದ್ದಾರೆ. ಈಗಾಗಲೇ ಮಿಲನಾ ಪ್ರಕಾಶ್‌ ನಿರ್ದೇಶನದ ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿಯೂ ದರ್ಶನ್‌ ಭಾಗವಹಿಸಿದ್ದಾರೆ. ಈ ಗ್ಯಾಪ್‌ನಲ್ಲಿಯೇ ಪತ್ನಿ ವಿಜಯಲಕ್ಷ್ಮೀ ಮತ್ತು ಪುತ್ರ ವಿನೀಶ್‌ ಜತೆಗೆ ಕೇರಳದ ಪ್ರಸಿದ್ಧ ದೇವಾಲಯಕ್ಕೆ ಆಗಮಿಸಿದ್ದಾರೆ. ಈ ದೇವಾಲಯದ ವೈಶಿಷ್ಠ್ಯತೆ ಏನೆಂದರೆ, ಇಲ್ಲಿ ಶತ್ರು ಸಂಹಾರ ಪೂಜೆ ನೆರವೇರಿಸಲಾಗುತ್ತದೆ!

ಹೌದು, ಕೇರಳದ ಕಣ್ಣೂರಿನಲ್ಲಿ ಪುರಾಣ ಪ್ರಸಿದ್ಧ ಶ್ರೀ ಮಡಾಯಿ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನವಿದೆ. ಈ ದೇವಸ್ಥಾನದ ಐತಿಹ್ಯದ ಕಾರಣಕ್ಕೇ ಇಲ್ಲಿ ಸಾಕಷ್ಟು ಭಕ್ತರು ನಿತ್ಯ ಆಗಮಿಸುತ್ತಾರೆ. ರಾಜಕಾರಣಿಗಳು, ಸಿನಿಮಾ ಕಲಾವಿದರೂ ದೇವರ ಮೊರೆಹೋದ ಸಾಕಷ್ಟು ಉದಾಹರಣೆಗಳಿವೆ. ಮಡಾಯಿ ಶ್ರೀ ತಿರುವರ್ಕ್ಕಾಟ್ಟು...