ಭಾರತ, ಮೇ 13 -- ಅಮೃತಧಾರೆ ಧಾರಾವಾಹಿಯಲ್ಲಿ ಪಂಕಜಾ ಎಂಬ ಮಹಿಳೆಯ ಕುರಿತು ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ಭಾಗ್ಯಮ್ಮ ಆಗಾಗ ಕನವರಿಸುತ್ತಿದ್ದ ಹೆಸರದು. ಈ ಹೆಸರಿನವರ ಜನ್ಮ ಪ್ರಮಾಣ ಪತ್ರ ಭೂಮಿಕಾಳಿಗೆ ದೊರಕಿದೆ. ಶಕುಂತಲಾದೇವಿ ಬಂಡವಾಳ ಬಯಲು ಮಾಡಲು ಇದು ಸೂಕ್ತ ಸಮಯ ಎಂದು ಭಾಗ್ಯಮ್ಮ ಎಂದುಕೊಂಡಿದ್ದಾರೆ.

ಇದೆಲ್ಲವೂ ಆದದ್ದು ಚಪ್ಪಲಿಯ ರಹಸ್ಯ ಕಂಡುಹಿಡಿಯುವ ಸಮಯದಲ್ಲಿ. ಕುಂತಲಾದೇವಿ ತನ್ನ ಕೊಠಡಿಗೆ ಬಾಗಿಲು ಹಾಕಿ ಹೊರಬರುತ್ತಿದ್ದಾರೆ. ದಾರಿಯಲ್ಲಿ ಸೃಜನ್‌ ಕುಳಿತು ಕೆಲಸ ಮಾಡುತ್ತಿದ್ದಾನೆ. ಇನ್ನೊಂದೆಡೆ ದಾರಿಯಲ್ಲಿ ಸುಧಾ ತನ್ನ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದಾಳೆ. ಶಕುಂತಲಾ ಹೋದಂತೆ ಇವರಿಬ್ಬರು ಭೂಮಿಕಾಗೆ ಅಪ್‌ಡೇಟ್‌ ನೀಡಿದ್ದಾರೆ. ಶಕುಂತಲಾದೇವಿಯ ಚಲನವಲನಗಳ ಮೇಲೆ ನಿಗಾ ಇಡಲು ಇವರಿಬ್ಬರು ಇದ್ದಾರೆ. ತಿಂಡಿ ತಿನ್ನಲು ಶಕುಂತಲಾ ಬಂದಾಗ ಅಲ್ಲಿ ಮಲ್ಲಿ ಇದ್ದಾಳೆ.

ಕೆಲಸದವರು ಎಲ್ಲಿ ಎಂದು ಕೇಳಿದಾಗ ಅವರೆಲ್ಲ ಮಾರ್ಕೆಟ್‌ಗೆ ಹೋಗಿದ್ದಾರೆ ಎಂದು ಮಲ್ಲಿ ಹೇಳುತ್ತಾಳೆ. ಈ ಸಮಯದಲ್ಲಿ ಭೂಮಿಕಾ ಶಕುಂತಲಾದೇವಿಯ ಕೊಠ...