ಭಾರತ, ಫೆಬ್ರವರಿ 28 -- ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ಹಳೆಯ ಸೈನ್ಸ್‌ ಫಿಕ್ಷನ್‌ ಸಿನಿಮಾ ನೋಡಲು ನೀವು ಯೋಜಿಸುತ್ತಿದ್ದರೆ ನಿಮಗೆ ಶಂಕರ್‌ನಾಗ್‌ ಮತ್ತು ಮಂಜುಳಾ ಅಭಿನಯಿಸಿದ ಸೀತಾರಾಮು ಸಿನಿಮಾ ಸೂಕ್ತ ಆಯ್ಕೆಯಾಗಬಲ್ಲದು. ಮೆದುಳು ಕಸಿ ಕುರಿತು ತೋರಿಸಿದ ಈ ಸಿನಿಮಾ ಒಳ್ಳೆಯ ಕಥೆಯೊಂದಿಗೆ ವೈಜ್ಞಾನಿಕ ಅಂಶಗಳಿಂದ ಗಮನ ಸೆಳೆಯುತ್ತದೆ. ವಿಜ್ಞಾನ ದಿನದ ಪ್ರಯುಕ್ತ ಈ ಸಿನಿಮಾದ ಕುರಿತು ಹೆಚ್ಚಿನ ವಿವರ ತಿಳಿಯೋಣ.

ದಿವಂಗತ ನಟ ಶಂಕರ್‌ನಾಗ್‌ ನಟಿಸಿರುವ ಸೀತಾರಾಮು ಎಂಬ ಸಿನಿಮಾವನ್ನು ಕನ್ನಡದ ಸೈನ್ಸ್‌ ಫಿಕ್ಷನ್‌ ಸಿನಿಮಾ ಎನ್ನಬಹುದೇನೋ. ಈ ಸಿನಿಮಾದಲ್ಲಿ ಮೃತಪಟ್ಟ ಒಬ್ಬರ ಮೆದುಳನ್ನು ಇನ್ನೊಬ್ಬರಿಗೆ ಕಸಿ ಮಾಡುವಂತಹ ಕಥೆಯಿದೆ. ವಿಶೇಷವೆಂದರೆ ಸೀತಾರಾಮು ಸಿನಿಮಾವು ಶಂಕರ್‌ನಾಗ್‌ ನಟಿಸಿದ ಮೊದಲ ಕಮರ್ಷಿಯಲ್‌ ಸಿನಿಮಾವಾಗಿದೆ. ಅದಕ್ಕೂ ಮೊದಲು ಸರಸ್ವತಿ (ಮರಾಠಿ ಸಿನಿಮಾ), ಒಂದಾನೊಂದು ಕಾಲದಲ್ಲಿ ಸಿನಿಮಾದಲ್ಲಿ ನಟಿಸಿದ್ದರು. ಒಂದಾನೊಂದು ಕಾಲದಲ್ಲಿ ಇವರ ಮೊದಲ ಕನ್ನಡ ಸಿನಿಮಾ. ದೆಹಲಿ ಅಂತಾರಾಷ್ಟ್ರೀಯ ಸಿನಿಮೋತ್...