ಭಾರತ, ಮೇ 1 -- ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು 2025ರಲ್ಲಿ ಮೇ 2ರ ಶುಕ್ರವಾರ ಆಚರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಶಂಕರಾಚಾರ್ಯರು ಏನೆಲ್ಲಾ ಪವಾಡಗಳನ್ನು ಮಾಡಿದರೆ, ಅವರ ಬಾಲ್ಯದ ಜೀವನ ಹೇಗಿತ್ತು, ಸನ್ಯಾಸತ್ವ ಸ್ವೀಕರ ಸೇರಿದಂತೆ ಅವರ ಜೀವನದ ಪ್ರಮುಖ ಹಂತಗಳ ಕುರಿತ ಆಸಕ್ತಿಕರ ಮಾಹಿತಿಯನ್ನು ಜ್ಯೋತಿಷಿ ಎಚ್ ಸತೀಶ್ ಅವರನ್ನು ಇಲ್ಲಿ ವಿವರಿಸಿದ್ದಾರೆ.

ಹಿಂದೂ ಧರ್ಮವು ಬೇರೆ ಧರ್ಮಗಳ ಪ್ರಾಬಲ್ಯದಿಂದ ತೊಂದರೆಗೆ ಒಳಗಾಗುತ್ತದೆ. ಇಂತಹ ವೇಳೆಯಲ್ಲಿ ಹಿಂದೂ ಧರ್ಮವನ್ನು ಉಳಿಸಲೆಂದು ಜನ್ಮವೆತ್ತಿದವರು ಶಂಕರಾಚಾರ್ಯರು. ಕೇರಳ ರಾಜ್ಯದ ಒಂದು ಗ್ರಾಮ. ಅದರ ಹೆಸರು ಕಾಲಟಿ. ಆ ಸ್ಥಳದಲ್ಲಿ ಶಿವಗುರು ಮತ್ತು ಆರ್ಯಾಂಬೆ ಎಂಬ ನಂಬೂದರಿ ಬ್ರಾಹ್ಮಣರಿದ್ದರು. ಇವರದ್ದು ಸಂಪ್ರದಾಯಸ್ಥ ಮನೆತನ. ಸದಾಕಾಲ ದೇವರ ಧ್ಯಾನ ಪೂಜೆಗಳಲ್ಲಿ ನಿರತರಾಗಿದ್ದರು. ದಂಪತಿ ಉನ್ನತ ವಿದ್ಯೆಯನ್ನು ಗಳಿಸಿದ್ದರು. ಶಿವಗುರು ವೇದದಲ್ಲಿ ಮುಂದಿದ್ದು, ಶಿವನ ಭಕ್ತರಾದ ಇವರು ಪ್ರತಿದಿನವೂ ಶಿವ ಪೂಜೆಯನ್ನು ಮಾಡುತ್ತಿದ್ದರು. ಇಷ್ಟಾದರೂ ಇವರ ಮನಸ್ಸಿ...