ಭಾರತ, ಫೆಬ್ರವರಿ 13 -- ಬೆಂಗಳೂರು: ನಗರದ ವಿವಿಧೆಡೆ ಫೆಬ್ರುವರಿ 14ರ ಶುಕ್ರವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 66/11 kV ಎಲಿಟಾ ಪ್ರೋಮೊನೇಡ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಎಲಿಟಾ ಪ್ರೋಮೊನೇಡ್ ಅಪಾರ್ಟ್‌ಮೆಂಟ್, ಕೆ.ಆರ್. ಲೇಔಟ್, ಶಾರದಾನಗರ, ಚುಂಚುನ್ ಘಟ್ಟ ಮತ್ತು ಉಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಪ್ರೆಸ್ಟೀಜ್ ಶಾಂತಿನಿಕೇತನ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶಾಂತಿನಿಕೇತನ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್‌, ಬ್ರಿಗೇಡ್ ಲೇಕ್ ಫ್ರಂಟ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್‌, ಟೋಟಲ್ ಎನ್ವಿರಾನ್‌ಮೆಂಟ್ ಅಪಾರ್ಟ್‌ಮೆಂಟ್‌, ಇಪಿಐಪಿ ಇಂಡಸ್ಟ್ರೀ...