Bengaluru, ಏಪ್ರಿಲ್ 27 -- ಆಚಾರ್ಯ ಚಾಣಕ್ಯರು ಮಾನವನ ಜೀವನದ ಕಲ್ಯಾಣಕ್ಕಾಗಿ ಹಾಗೂ ಸಮಾಜದ ಒಳಿತಿಗಾಗಿ ನೀತಿ ಶಾಸ್ತ್ರದ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಅವರು ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮನಾಗಿ ಜೀವನವನ್ನು ನಡೆಸಬೇಕು ಎಂದು ನೀತಿಗಳನ್ನು ರೂಪಿಸಿದ್ದಾರೆ. ಅದು ಸಾಮಾಜಿಕವಾಗಿರಲಿ, ಆರ್ಥಿಕವಾಗಿರಲಿ ಅಥವಾ ರಾಜಕೀಯವಾಗಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅವರ ನೀತಿಗಳು ಜನರಿಗೆ ಮಾರ್ಗದರ್ಶಿಯಾಗಿವೆ ಎಂದು ಸಾಬೀತಾಗಿದೆ. ಚಾಣಕ್ಯರು ನೀತಿ ಹಾಗೂ ನಿದರ್ಶನಗಳ ಮೂಲಕ ಅನೇಕ ತಪ್ಪು ತಿಳುವಳಿಕೆಗಳನ್ನು ದೂರಮಾಡಿದ್ದಾರೆ.

ಮನುಷ್ಯನಿಗೆ ಯಾವುದರ ಬಗ್ಗೆ ಹೆಮ್ಮೆಯಿರಬೇಕು ಎಂಬುದನ್ನು ಸಹ ಚಾಣಕ್ಯರು ಹೇಳಿದ್ದಾರೆ. ಬಾಹ್ಯ ಸೌಂದರ್ಯವೊಂದಿದ್ದರೆ ವ್ಯಕ್ತಿಯ ಜ್ಞಾನ ವೃದ್ಧಿಯಾಗುವುದಿಲ್ಲ. ಜೊತೆಗೆ ಅವನನ್ನು ವಿದ್ವಾಂಸನನ್ನಾಗಿಯೂ ಮಾಡುವುದಿಲ್ಲ. ಆಚಾರ್ಯ ಚಾಣಕ್ಯ ಹಾಗೂ ಸಾಮ್ರಾಟ ಚಂದ್ರಗುಪ್ತರ ನಡುವೆ ನಡೆದ ಘಟನೆಯಿಂದ ಇದನ್ನು ಸರಿಯಾಗಿ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಆ ಘಟನೆ ಏನು ಇಲ್ಲಿದೆ ಓದಿ.

ಸಾಮ್ರಾಟ ಚಂದ್ರಗುಪ್ತನು ನ...