ಭಾರತ, ಫೆಬ್ರವರಿ 18 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಹಾಗೂ ಸುಪ್ರಿತಾ ನಡುವೆ ವಾಗ್ವಾದ ಆಗಿದೆ. ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದಾರೆ. ಕಾವೇರಿ ಈ ಮನೆಗೆ ತಾನೇ ಸರ್ವಾಧಿಕಾರಿ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಆದರೆ ಅವಳ ನಡವಳಿಕೆ ಸುಪ್ರಿತಾಳಿಗೆ ಇಷ್ಟವಾಗುತ್ತಿಲ್ಲ. ತುಂಬಾ ಬೇಸರದಿಂದ ಸುಪ್ರಿತಾ ವೈಷ್ಣವ್‌ಗೆ ಎರಡನೇ ಮದುವೆ ಮಾಡೋದು ಬೇಡ ಎಂದು ಹೇಳುತ್ತಾಳೆ. ಆದರೆ, ನನ್ನ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡಕೂಡದು ಎನ್ನುವ ರೀತಿಯಲ್ಲಿ ಕಾವೇರಿ ಪ್ರತ್ಯುತ್ತರ ನೀಡುತ್ತಾಳೆ. ಇನ್ನು ಸುಪ್ರಿತಾಳ ಅಣ್ಣ ಕೃಷ್ಣನಿಗೂ ಸುಪ್ರಿತಾ ಒಂದು ಮಾತು ಹೇಳುತ್ತಾಳೆ "ಅಣ್ಣಾ ನೀನು ಅತ್ಗೆ ಗಂಡ ಅನ್ನೋದನ್ನ ಮರಿಬೇಡ. ಅವಳಿಗೆ ಈ ಮನೆಯಲ್ಲಿ ಹೇಗೆ ಇರ್ಬೇಕು ಅಂತ ನೀನೇ ಸ್ವಲ್ಪ ಹೇಳು" ಎಂದು ಹೇಳುತ್ತಾಳೆ.

ಆಗ ಕೃಷ್ಣ ಕಾವೇರಿ ಮಾತನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಾನೆ. ಆದರೆ, ಕಾವೇರಿ ಕೃಷ್ಣ ಹೇಳಿದ ಮಾತನ್ನು ಕೇಳುವುದಿಲ್ಲ. ಇಲ್ಲ ನಾನು ಈ ನಿರ್ಧಾರ ಬದಲಾಯಿಸೋದಿಲ್ಲ. ಯಾರ ಮಾತನ್ನೂ ಕೇಳಲ್ಲ ಎಂದು ಹೇಳಿಬಿಡುತ್ತಾಳೆ...