ಭಾರತ, ಮಾರ್ಚ್ 7 -- ಬೆಂಗಳೂರಿನಲ್ಲಿ ಪ್ರಸಿದ್ಧಿ ಪಡೆದಿರುವ ವೆಜ್ ಹೋಟೆಲ್‌ಗಳಲ್ಲಿ ಪಾಕಶಾಲೆ ಕೂಡ ಒಂದು. ಇದೀಗ ಈ ಹೋಟೆಲ್‌ನಲ್ಲಿ ಅಳವಡಿಸಿರುವ ಬೋರ್ಡ್‌ನ ಚಿತ್ರವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಮಾತ್ರವಲ್ಲ ಬೋರ್ಡ್‌ನಲ್ಲಿರುವ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಬೋರ್ಡ್‌ನಲ್ಲಿ ಊಟ, ತಿಂಡಿ ಮಾಡುವಾಗ ಜನರು ಕೆಲವೊಂದು ನಿರ್ದಿಷ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ತಿಳಿಸಲಾಗಿದೆ. ಈ ಸೂಚನಾಫಲಕವು ಈಗ ವೈರಲ್ ಆಗಿದೆ.

ಪಾಕಶಾಲೆ ಹೋಟೆಲ್‌ ತಮ್ಮ ಹೋಟೆಲ್‌ನಲ್ಲಿ ಊಟ ಮಾಡುವವರು ರಾಜಕೀಯ ಹಾಗೂ ರಿಯಲ್‌ ಎಸ್ಟೇಟ್ ವಿಚಾರಗಳನ್ನು ಮಾತನಾಡುವಂತಿಲ್ಲ ಎಂದು ಒತ್ತಾಯಿಸುವ ಬೋರ್ಡ್ ಅನ್ನು ಅಳವಡಿಸಿದೆ.

ಫರಾಗೊ ಮೆಟಿಕುರ್ಕೆ ಎನ್ನುವ ಎಕ್ಸ್ ಬಳಕೆದಾರರು ಈ ಫೋಟೊವನ್ನು ತಮ್ಮ ಎಕ್ಸ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸೂಚನೆ ಸ್ಪಷ್ಟವಾಗಿದೆ ಎಂದು ಅವರು ಶೀರ್ಷಿಕೆಯನ್ನೂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ, ದೂತ ಸಮೀರ್‌ ಯೂ...