ಭಾರತ, ಫೆಬ್ರವರಿ 11 -- ಸಾನ್ಯ ಮಲ್ಹೋತ್ರಾ ಅಭಿನಯ ಸಿನಿಮಾ Mrs (ಶ್ರೀಮತಿ) ಸೀನ್‌ಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮದುವೆಯಾದ ಹೆಣ್ಣಿನ ಸ್ಥಿತಿ ಹಾಗೂ ವಾಸ್ತವವನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಎಲ್ಲ ಮಹಿಳೆಯರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಅನುಭವಿಸುವ ನೋವನ್ನು, ತಿರಸ್ಕಾರವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಾನ್ಯ ಮಲ್ಹೋತ್ರಾ ಅಭಿನಯಕ್ಕಿರುವ ಶಕ್ತಿಯೇ ಈ ಸಿನಿಮಾವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳಲ್ಲಿ ಕೆಲವೊಂದು ತುಣುಕುಗಳು ಭಾರೀ ಚರ್ಚೆಯಾಗುತ್ತಿದೆ. ಅಂತಹ ಕೆಲವು ವೈರಲ್ ದೃಶ್ಯಗಳಲ್ಲಿ ಕಾಣಿಸುವುದು ಹೆಣ್ಣಿನ ಬದುಕಿನ ಕರಿನೆರಳು. ಹೆಣ್ಣಿನ ಜೀವನದ ಹಲವು ಭಾಗಗಳು ಕಳೆದು ಹೋಗುವುದು ಅಡುಗೆ ಮನೆಯಲ್ಲಿ. ಇತ್ತೀಚಿನ ದಿನಗಳಲ್ಲಿ ಹೆಂಗಳೆಯರೂ ಕೆಲಸಕ್ಕೆ ಹೋಗಿ ಸ್ವಾಲಂಭಿಗಳಾಗಬೇಕು ಎನ್ನುವ ಹಂಬಲದಿಂದ ಹೊರ ಜಗತ್ತಿಗೆ ಪಾದಾರ್...