ಭಾರತ, ಮಾರ್ಚ್ 19 -- ಭಾರತದ ಚಿತ್ರರಂಗದಲ್ಲಿ ಕಡಿಮೆ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಿದ ನಟಿಯರು ಇದ್ದಾರೆ. ಇದೇ ರೀತಿ ಅತ್ಯುತ್ತಮ ಶಿಕ್ಷಣ ಪಡೆದು ಸಿನಿಮಾ ರಂಗದಲ್ಲಿ ಜನಪ್ರಿಯತೆ ಪಡೆದವರು ಇದ್ದಾರೆ. ಸಾಕಷ್ಟು ನಟಿಯರು ಉನ್ನತ ಶಿಕ್ಷಣ ಪಡೆದಿದ್ದಾರೆ. ಕೆಲವು ನಟಿಯರು ಮೆಡಿಕಲ್‌ ಶಿಕ್ಷಣ ಪಡೆದಿದ್ದಾರೆ. ಇನ್ನು ಕೆಲವು ನಟಿಯರು ಡಾಕ್ಟರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಲವು ನಟಿಯರು ವೈದ್ಯಕೀಯ ಶಿಕ್ಷಣ ಪಡೆದು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು, ಮುಂದಿನ ದಿನಗಳಲ್ಲಿ ಆಕ್ಟಿಂಗ್‌ ಸಾಕು ಎನಿಸಿದರೆ ಡಾಕ್ಟರ್‌ ಆಗಿಯೂ ಕೆಲಸ ಮಾಡಬಹುದು. ಮಾನುಷಿ ಚಿಲ್ಲರ್‌, ಸಾಯಿ ಪಲ್ಲವಿ ಸೇರಿದಂತ ಹಲವು ನಟಿಯರು ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರೀಲೀಲಾ ಅವರು ಎಂಬಿಬಿಎಸ್‌ ಪದವಿ ಪಡೆದಿದ್ದಾರೆ. ತನ್ನ ವೈದ್ಯಕೀಯ ಶಿಕ್ಷಣವನ್ನು 2021ರಲ್ಲಿ ಪೂರೈಸಿದ್ದಾರೆ. ಇವರ ತಾಯಿ ಗೈನಾಲಕಜಸ್ಟ್‌. ಅಮ್ಮನಂತೆ ಡಾಕ್ಟರ್‌ ಆಗಲು ಬಯಸಿ ಮೆಡಿಕಲ್‌ ಶಿಕ್ಷಣ ಪಡೆದಿದ್ದರು. ಆದರೆ, ಚಿತ್ರರಂಗಕ್ಕೆ ಎಂಟ್ರಿ ನೀಡಿದರ...